ಈ ವರ್ಷದ ಹಜ್ ಯಾತ್ರೆಗೆ ಸ್ವದೇಶದ 60,000 ಜನರಿಗೆ ಅವಕಾಶ ನೀಡಿದ ಸೌದಿ ಅರೇಬಿಯ

Update: 2021-06-12 14:03 GMT

ದುಬೈ: ಈಗಿನ ಕೊರೋನವೈರಸ್ ಬಿಕ್ಕಟ್ಟಿನ ದೃಷ್ಟಿಯಿಂದ ಈ ವರ್ಷದ ಹಜ್ ಯಾತ್ರೆಗೆ 60,000 ಜನರಿಗೆ ಅವಕಾಶ ನೀಡಲಾಗಿದೆ. ಎಲ್ಲರೂ ಸೌದಿ ನಿವಾಸಿಗಳೇ ಆಗಿರುತ್ತಾರೆ ಎಂದು ಸೌದಿ ಅರೇಬಿಯಾ ಹೇಳಿದೆ.

ಸೌದಿಯು ತನ್ನ ಸರಕಾರಿ ಸೌದಿ ಪ್ರೆಸ್ ಏಜೆನ್ಸಿಯಲ್ಲಿ ಶನಿವಾರ ಈ ಘೋಷಣೆ ಮಾಡಿದೆ.  ಹಜ್ ಹಾಗೂ  ಉಮ್ರಾ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ  ಎಂದು ಅದು ಉಲ್ಲೇಖಿಸಿದೆ.

ಕಳೆದ ವರ್ಷದ ಹಜ್ ನಲ್ಲಿ  ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದ 1,000 ಜನರಿಗೆ ಮಾತ್ರ  ಹಜ್ ನಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿತ್ತು. ಈ ಬಾರಿಯ ಹಜ್ ಯಾತ್ರೆ  ಜುಲೈ ಮಧ್ಯದಲ್ಲಿ ಆರಂಭವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News