ಆಸ್ಪತ್ರೆಗಳು, ರಾಜ್ಯಗಳು ಕೋವಿಡ್ ಸಾವುಗಳ ಲೆಕ್ಕಪರಿಶೋಧನೆ ನಡೆಸಬೇಕು: ಏಮ್ಸ್ ಮುಖ್ಯಸ್ಥ

Update: 2021-06-12 17:29 GMT
photo: The Indian Express

ಹೊಸದಿಲ್ಲಿ: ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕಾರ್ಯತಂತ್ರಗಳನ್ನು ರೂಪಿಸುವ ಭಾರತದ ಪ್ರಯತ್ನಗಳಿಗೆ ಆಸ್ಪತ್ರೆಗಳು ಹಾಗೂ  ರಾಜ್ಯ ಸರಕಾರಗಳು ಕೋವಿಡ್ ಸಂಬಂಧಿತ ಸಾವುಗಳನ್ನು "ತಪ್ಪಾಗಿ ವರ್ಗೀಕರಿಸುವುದು" ಯಾವುದೇ ರೀತಿಯಲ್ಲಿ ಉಪಯೋಗವಾಗದು ಎಂದು ದೇಶದ ಪ್ರಮುಖ ವೈದ್ಯರೊಬ್ಬರು ಹೇಳಿದ್ದಾರೆ.

ಈ ಸಂದರ್ಭಗಳಲ್ಲಿ ಮರಣದ ಸ್ಪಷ್ಟ ಚಿತ್ರಣಕ್ಕಾಗಿ, ಸಂಖ್ಯೆಗಳನ್ನು ಪುನರ್ರಚಿಸಲು ರಾಜ್ಯ ಸರಕಾರ,ಆಸ್ಪತ್ರೆಗಳು ಸಾವಿನ ಕುರಿತಾಗಿ ಲೆಕ್ಕ ಪರಿಶೋಧನೆ  ಮಾಡಬೇಕು ಎಂದು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ವಿವಿಧ ರಾಜ್ಯ ಸರಕಾರಗಳು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿವೆ ಎಂಬ ವರದಿಗಳು ಮತ್ತು ಆರೋಪಗಳ ಮಧ್ಯೆ ಏಮ್ಸ್ ಮುಖ್ಯಸ್ಥರ ಅಭಿಪ್ರಾಯ ವ್ಯಕ್ತವಾಗಿದೆ. ಮಧ್ಯಪ್ರದೇಶದಲ್ಲಿ, ಅಧಿಕೃತ ಸಂಖ್ಯೆಗಳಿಗೂ ಹಾಗೂ ಏಪ್ರಿಲ್‌ನಲ್ಲಿ ನಡೆಸಿದ ಅಂತ್ಯಕ್ರಿಯೆಯ ಸಂಖ್ಯೆಯ ನಡುವೆ ಹೊಂದಾಣಿಕೆಯಿಲ್ಲ.

"ಒಬ್ಬ ವ್ಯಕ್ತಿಯು ಹೃದಯಾಘಾತದಿಂದ ಸಾವನ್ನಪ್ಪುತ್ತಾನೆ ಎಂದು ಅಂದುಕೊಳ್ಲೋಣ, ಮತ್ತು ಅವನಿಗೆ ಕೋವಿಡ್ ಇದ್ದರೆ, ಕೋವಿಡ್, ಹೃದಯಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ನೀವು ಇದನ್ನು ಕೋವಿಡ್ ಅಲ್ಲದ ಸಾವು ಎಂದು ತಪ್ಪಾಗಿ ವರ್ಗೀಕರಿಸಿರಬಹುದು ... ಹೃದಯ ಸಮಸ್ಯೆಯಾಗಿದ್ದರೂ ಅದು ನೇರವಾಗಿ ಕೋವಿಡ್‌ಗೆ ಜೋಡಿಸಲಾಗುತ್ತದೆ "ಎಂದು ಡಾ ಗುಲೇರಿಯಾ ಎನ್‌ಡಿಟಿವಿಗೆ ತಿಳಿಸಿದರು.

ಎಲ್ಲಾ ಆಸ್ಪತ್ರೆಗಳು ಹಾಗೂ  ರಾಜ್ಯಗಳು ಡೆತ್ ಆಡಿಟ್ ಮಾಡುವ ಅವಶ್ಯಕತೆಯಿದೆ ... ಏಕೆಂದರೆ ಮರಣಕ್ಕೆ ಕಾರಣಗಳು ಯಾವುವು ಹಾಗೂ  ನಮ್ಮ ಸಾವಿನ ಪ್ರಮಾಣವನ್ನು ತಗ್ಗಿಸಲು ಏನು ಮಾಡಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮಲ್ಲಿ ಸ್ಪಷ್ಟವಾದ ಮಾಹಿತಿಯಿಲ್ಲದಿದ್ದರೆ, ನಮ್ಮ ಮರಣ ಪ್ರಮಾಣವನ್ನು ಕಡಿಮೆ ಮಾಡುವ ತಂತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ "ಎಂದು ಅನುಭವಿ ವೈದ್ಯರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News