ಸಾಲ್ಮರ ಅಬ್ಬು ಹಾಜಿ ಮತ್ತು ಸಹೋದರರು ಚಾರಿಟೇಬಲ್ ಟ್ರಸ್ಟ್ ನಿಂದ ಕಿಟ್ ವಿತರಣೆ

Update: 2021-06-13 06:59 GMT

ಪುತ್ತೂರು: ಸಾಲ್ಮರ ಅಬ್ಬು ಹಾಜಿ ಮತ್ತು ಸಹೋದರರು ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಅರ್ಹ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಸಾಲ್ಮರದಲ್ಲಿ ನಡೆಯಿತು. ಅಬ್ದು ಹಾಜಿ ಮತ್ತು ಸಹೋದರರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಲೈಮಾನ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ವಿಧಾನ ಸಭಾ ಕ್ಷೇತ್ರ ದ ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೊರೋನ ಮಹಾಮಾರಿಯಿಂದಾಗಿ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಾತಿ, ಧರ್ಮ, ಬಡವ ಶ್ರೀಮಂತ ಎನ್ನುವ ವ್ಯತ್ಯಾಸವಿಲ್ಲದೇ ಎಲ್ಲರನ್ನು ಕೊರೋನ ಕಾಡುತ್ತಿದೆ. ತಮ್ಮ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿರುವ ಪ್ರಸಕ್ತ ಸಂದರ್ಭದಲ್ಲಿ ಸಾಲ್ಮರ ಅಬ್ಬು ಹಾಜಿ ಮತ್ತು ಸಹೋದರರು ಚಾರಿಟೇಬಲ್ ಟ್ರಸ್ಟ್ ಮೂಲಕ ಬಡವರಿಗೆ, ದೀನದಲಿತರಿಗೆ ಆಹಾರ ಕಿಟ್ ನೀಡಿ ಅವರಿಗೆ ಆತ್ಮ ಸ್ಥೈರ್ಯ ನೀಡುವ ಕಾರ್ಯ ಮಾದರಿಯಾಗಿದ್ದು ಇದು ಹೃದಯ ಶ್ರೀಮಂತಿಕೆ ಮತ್ತು ಮಾನವೀಯತೆಯಿಂದ ಕೂಡಿದ ಕಾರ್ಯಕ್ರಮವಾಗಿದೆ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ಮೂಡಿಬರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸಂಯೋಜಕರಾದ  ಹೇಮನಾಥ ಶೆಟ್ಟಿ ಕಾವು, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಪುತ್ತೂರು ಸರಕಾರಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ, ನಗರಸಭಾ ಸದಸ್ಯರಾದ ಪ್ರೇಮ್ ಕುಮಾರ್ ಹಾಗೂ ರಾಬಿನ್ ತಾವ್ರೋ, ಜೆಡಿಎಸ್ ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ, ಎಸ್ಡಿಪಿಐ ನೇತಾರ ಜಾಬಿರ್ ಅರಿಯಡ್ಕ, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಂ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಟಿವೈದ್ಯ ಸಂಶುದ್ದೀನ್ ಸಾಲ್ಮರ, ಬಾತಿಷ ಮುದ್ದೋಡಿ, ಹಮೀದ್ ಸಾಲ್ಮರ ಮಹಮ್ಮದ್ ತಾರಿಗುಡ್ಡೆ ಸಹಿತ ಹಲವರು ಉಪಸ್ಥಿತರಿದ್ದರು.

ಅಬ್ಬು ಹಾಜಿ ಮತ್ತು ಸಹೋದರರು ಚಾರಿಟೇಬಲ್ ಟ್ರಸ್ಟ್ ನ ಕಬೀರ್ ಸಾಲ್ಮರ, ಸುಲೈಮಾನ್ ಇಕ್ಬಾಲ್, ಅಬ್ದುಲ್ ಹಮೀದ್  ಸೋಂಪಾಡಿ, ಸಲಾಹುದ್ದೀನ್, ಉಮರ್ ಫೈಝಿ, ಅನ್ಸಾರುದ್ದೀನ್ ಸಾಲ್ಮರ ಸಹಕರಿಸಿದರು.

ಅಡ್ವೊಕೇಟ್ ನೂರುದ್ದೀನ್ ಸಾಲ್ಮರ ಸ್ವಾಗತಿಸಿದರು. ಅಬ್ಬು ಹಾಜಿ ಮತ್ತು ಸಹೋದರರು ಚಾರಿಟೇಬಲ್ ಟ್ರಸ್ಟ್  ಪ್ರಧಾನ ಕಾರ್ಯದರ್ಶಿ ಸಾಲ್ಮರ ಮಹಮ್ಮದ್ ಶರೀಫ್ ವಂದಿಸಿದರು.

ನೇಪಾಲ ಮೂಲದ ಸ್ಥಳೀಯ ಕಾರ್ಮಿಕರೋರ್ವರಿಗೆ ಕಿಟ್ ವಿತರಿಸುವ ಮೂಲಕ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು. ಸ್ಥಳೀಯ ಆಶಾ ಕಾರ್ಯಕರ್ತೆಗೆ ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ ನೂರಕ್ಕೂ ಮಿಕ್ಕಿ ಅರ್ಹ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News