ಬದ್ರಿಯಾ ವೆಲ್ಫೇರ್ ಕಮಿಟಿ ಕೂರ್ನಡ್ಕ ಯುಎಇ ವಾರ್ಷಿಕ ಮಹಾ ಸಭೆ, ಪದಾಧಿಕಾರಿಗಳ ಆಯ್ಕೆ

Update: 2021-06-13 08:16 GMT

ದುಬೈ : ಬದ್ರಿಯಾ ವೆಲ್ಫೇರ್ ಕಮಿಟಿ ಕೂರ್ನಡ್ಕ ಯುಎಇ ಇದರ ನಾಲ್ಕನೇ ವಾರ್ಷಿಕ ಮಹಾಸಭೆಯು ಅಶ್ರಫ್ ಕೆಮ್ಮಿಂಜೆ ಅವರ ಶಾರ್ಜಾದಲ್ಲಿರುವ ಕಚೇರಿಯಲ್ಲಿ ಇತ್ತಿಚೆಗೆ ನಡೆಯಿತು.

ಆಸ್ಕರ್ ಅಲಿ ತಂಙಳ್ ಕೋಲ್ಪೆ ಅವರ ದುಆ ದೊಂದಿಗೆ ಆರಂಭವಾದ ಸಭೆಯನ್ನು ಫಝಲ್ ರಹ್ಮಾನ್ ಕೂರ್ನಡ್ಕ ಸ್ವಾಗತಿಸಿದರು.

ಅಬ್ದುಲ್ ಖಾದರ್ ಬೈತಡ್ಕ ಉದ್ಘಾಟಿಸಿ, ಪ್ರಸಕ್ತ ಸನ್ನಿವೇಷದಲ್ಲಿ ಮುಸ್ಲಿಂ ಸಮುದಾಯದಲ್ಲಿ ವಿದ್ಯಾಭ್ಯಾಸದ ಅಗತ್ಯತೆ ಮತ್ತು ಮಹತ್ವವನ್ನು ವಿವರಿಸಿ, ಕೂರ್ನಡ್ಕ ಮಹಲ್ ನ ವಿಶೇಷತೆ ಬಗ್ಗೆ ವಿವರಿಸಿದರು.

ಬಳಿಕ ಇಬ್ಬಿಯಾಕ ಬಿಡ್ಲ್ಯೂಸಿ ಸಮಿತಿಯ ಕಾರ್ಯ ವೈಕರ್ಯಗಳನ್ನು ವಿಸ್ತರಿಸಿದರು. ಕಾರ್ಯದರ್ಶಿ ಆರಿಫ್ ಕೂರ್ನಡ್ಕ ವರದಿ ವಾಚಿಸಿ, ಪ್ರಧಾನ ಕಾರ್ಯದರ್ಶಿ ಅಸೀಫ್ ಮರೀಲ್ ಲೆಕ್ಕ ಪತ್ರ ಮಂಡನೆ ಮಾಡಿದರು.

ಬಳಿಕ ಅಧ್ಯಕ್ಷರಾದ ಅಶ್ರಫ್ ಕೆಮ್ಮಿಂಜೆ ಮಾತನಾಡಿ, ಸಮಿತಿಯು ಗತ ವರ್ಷದಲ್ಲಿ ಕೈಗೊಂಡ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಅದಕ್ಕಾಗಿ ಸಹಕರಿಸಿದ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸಿ ಹಾಲಿ ಸಮಿತಿಯನ್ನು ಬರ್ಖಾಸ್ತು ಗೊಳಿಸುವುದಾಗಿ ಘೋಷಿಸಿ ಹೊಸ ಸಮಿತಿ ನಿರ್ಮಾಣಕ್ಕೆ ಅನುವು ಮಾಡಿ ಕೊಟ್ಟರು.

ಹೊಸ ಸಮಿತಿಯ ರೂಪೀಕರಣದ ಜವಾಬ್ದಾರಿಯನ್ನು ಶರೀಫ್ ಕೊಡ್ನೀರ್ ಅವರಿಗೆ ವಹಿಸಿ ಕೊಡಲಾಯಿತು. ಅದರಂತೆ 2021-2022 ರ ಕಾಲಾವಧಿಗೆ ಹಾಜರಿದ್ದ ಸರ್ವ ಸದಸ್ಯರ ಬೆಂಬಲದೊಂದಿಗೆ ನೂತನ ಸಮಿತಿ ರಚನೆ ಮಾಡಲಾಯಿತು.

ಧಾರ್ಮಿಕ ಸಲಹೆಗಾರರಾಗಿ ಸಯ್ಯದ್ ಆಸ್ಕರ್ ಅಲಿ ತಂಙಳ್, ಉನೈಸ್ ಫೈಝಿ ಉಸ್ತಾದ್ ಹಾಗೂ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಲ್ಲೇಗ ಇವರುಗಳನ್ನು ಆರಿಸಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳಾಗಿ

ಗೌರವ ಸಲಹೆಗಾರರು: ಅಬ್ದುಲ್ ಖಾದರ್ ಬೈತಡ್ಕ, ಶರೀಫ್ ಕಾವು, ಅಶ್ರಫ್ ಶಾಹ್ ಮಾಂತೂರ್, ಇಬ್ಬಿಯಾಕ, ರಝಾಕ್ ಹಾಜಿ ಸೋಂಪಡಿ, ಅಬ್ದುಲ್ ಸಲಾಂ ಬಪ್ಪಳಿಗೆ, ಯೂಸುಫ್ ಹಾಜಿ ಬೆರಿಕೆ, ಶರೀಫ್ ಕೊಡ್ನೀರ್, ಅಶ್ರಫ್ ಪರ್ಲಡ್ಕ.

ಗೌರವಾಧ್ಯಕ್ಷರಾಗಿ ಅಶ್ರಫ್ ಕೆಮ್ಮಿಂಜೆ, ಅಧ್ಯಕ್ಷರಾಗಿ ಅಸೀಫ್ ಮರೀಲ್, ಕಾರ್ಯಾಧ್ಯಕ್ಷರಾಗಿ ಇಸ್ಹಾಕ್ ಕೂರ್ನಡ್ಕ, ಉಪಾಧ್ಯಕ್ಷರಾಗಿ ರಶೀದ್ ಮರೀಲ್, ಯೆಹ್ಯಾ ಕೂರ್ನಡ್ಕ, ಶಾಕಿರ್ ಕೂರ್ನಡ್ಕ, ಇಕ್ಬಾಲ್ (ಬಾಶು ಭಾಯಿ) ಕೂರ್ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕೆಮ್ಮಿಂಜೆ, ಕಾರ್ಯದರ್ಶಿಯಾಗಿ ಆರಿಫ್ ಕೂರ್ನಡ್ಕ, ಫಝಲ್ ರಹ್ಮಾನ್ ಕೂರ್ನಡ್ಕ, ಝಯೀದ್ ಕೂರ್ನಡ್ಕ, ಖಜಾಂಜಿಯಾಗಿ ಉಸ್ಮಾನ್, ಇಂಡಿಯನ್ ಕಾರ್ಡಿನೇಟರ್ ಉಸ್ಮಾನ್ ಕೆಮ್ಮಿಂಜೆ, ಆದಮ್ ಕೆಮ್ಮಿಂಜೆ, ಸಂಘಟನಾ ಕಾರ್ಯದರ್ಶಿಯಾಗಿ ಸಂಶುದ್ದೀನ್ ಕೂರ್ನಡ್ಕ, ಲೆಕ್ಕ ಪರಿಶೋಧಕರಾಗಿ ಆಶಿಕ್ ಬೈತಡ್ಕ, ಸಂಚಾಲಕರಾಗಿ ಅಶ್ರಫ್ ಯುಕೆ, ಅಹ್ಮದ್ ಭಾವ ಕೆಮ್ಮಿಂಜೆ , ಮುನೀರ್ ಕೂರ್ನಡ್ಕ, ಸಮೀರ್ ಕಲ್ಲಾರೆ, ಹಂಝ ಕೆಮ್ಮಿಂಜೆ, ಸಮೀರ್ ಕೂರ್ನಡ್ಕ, ಶುಕೂರ್ ಮರೀಲ್ ಹಾಗೂ 35 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರೂಪಿಸಲಾಯಿತು.

ನೂತನ ಉಪಾಧ್ಯಕ್ಷ ಶಾಕಿರ್ ಕೂರ್ನಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News