ಜೂ.20 : ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2021-06-14 17:21 GMT

ಕೊಣಾಜೆ: ಬ್ಲಡ್ ಡೋನರ್ಸ್ ಮಂಗಳೂರು ಕಳೆದ ಹಲವಾರು ವರ್ಷಗಳಿಂದ ರಕ್ತದಾನದ ಮಹತ್ವ ಮತ್ತು ಅದರಿಂದ ದಾನಿಗಳಿಗೆ ಆಗುವ ಪ್ರಯೋಜನಗಳ ಬಗ್ಗೆ  ಜಾಗೃತಿಯನ್ನು ಮೂಡಿಸಿ  ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬಂದಿದ್ದು ಇದೀಗ 300ನೇ ರಕ್ತದಾನ ಶಿಬಿರ ಜೂ.20ರಂದು ಹೂಹಾಕುವಕಲ್ಲಿನಲ್ಲಿ ನಡೆಯಲಿದೆ ಎಂದು ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷರಾದ ಸಿದ್ಧೀಕ್ ಮಂಜೇಶ್ವರ ಹೇಳಿದರು.

ಅವರು ಸೋಮವಾರ ಕುತ್ತಾರುವಿ‌ನ ಖಾಸಗಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬ್ಲಡ್ ಡೋನರ್ಸ್ ಸಂಸ್ಥೆಯು ಇಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಹಲವಾರು ಶಿಬಿರಗಳನ್ನು ನಡೆಸಿದೆ. ಒಟ್ಟಾಗಿ ರಕ್ತದಾನ ಶಿಬಿರಗಳು ಹಾಗೂ ತುರ್ತು ರಕ್ತಪೂರೈಕೆಯ ಮುಖೇನ ಬರೋಬ್ಬರಿ 29,000 ಕ್ಕಿಂತಲೂ ಅಧಿಕ ಯುನಿಟ್ ರಕ್ತವನ್ನು ಸಂಗ್ರಹಿಸಿ ರೋಗಿಗಳಿಗೆ ಪೂರೈಸಲಾಗಿದೆ. ಅಲ್ಲದೆ ರಕ್ತದಾನದೊಂದಿಗೆ ಸೂರಿಲ್ಲದವರಿಗೆ ಸೂರು ಎಂಬ ಯೋಜನೆಯಡಿಯಲ್ಲಿ ಮುಡಿಪು ಪರಿಸರದ ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಕಾರ್ಯ, ಕಳೆದ ವರ್ಷ ಬೆಳ್ತಂಗಡಿ ಪರಿಸರದಲ್ಲಿ ಉಂಟಾದ ನೆರೆಯ ಸಂದರ್ಭ ದಲ್ಲಿ ಮೂಲಭೂತ ಸೌಕರ್ಯಗಳ ನೆರವು, ಅಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿ ತುರ್ತು ಔಷಧಿಗಳ ಪೂರೈಕೆ ಹಾಗೂ ಸಾರ್ವಜನಿಕರಿಗೆ ಸಹಾಯ, ಬಡವರಿಗೆ ಆಹಾರ ಕಿಟ್ ವಿತರಣೆ ಸೇರಿದಂತೆ ಹಲವಾರು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದರು.  ಇದೇ ಸಂದರ್ಭದಲ್ಲಿ ಸಂಸ್ಥೆಯ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರಝಾಕ್ ಸಾಲ್ಮರ, ಸೌದಿ ಘಟಕದ ಕಾರ್ಯನಿರ್ವಾಹಕರುಗಳಾದ ಶಾಹುಲ್ ಹಮೀದ್ ಕಾಶಿಪಟ್ಣ, ಫಾರೂಕ್ ಆತೂರು, ಹಮೀದ್ ಪಜೀರ್, ಇರ್ಷಾದ್ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News