ತೈಲ ಬೆಲೆ ಏರಿಕೆ: ಮಜೂರು, ಎರ್ಮಾಳಿನಲ್ಲಿ ಪ್ರತಿಭಟನೆ

Update: 2021-06-14 17:32 GMT

ಕಾಪು: ಪೆಟ್ರೋಲ್ ಡಿಸೇಲ್ ಹಾಗು ಗ್ಯಾಸ್ ಬೆಲೆ ಏರಿಕೆಯ ವಿರುದ್ಧ ಮಜೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಸೋಮವಾರ ಕೊಂಬಗುಡೆ ಯ ಪೆಟ್ರೋಲ್ ಪಂಪ್‍ನಲ್ಲಿ  ಪ್ರತಿಭಟನೆ ನಡೆಯಿತು.

ಕಾಪು ಕಾಂಗ್ರೆಸ್ ಅಲ್ಪ ಅಸಂಖ್ಯಾತ ಘಟಕದ ಅಧ್ಯಕ್ಷ ರಾದ ಶರ್ಪುದೀನ್ ಶೇಖ್, ಅಲ್ಪ ಅಸಂಖ್ಯಾತ ಸಂಯೋಜಕರಾದ ಫಾರುಕ್ ಚಂದ್ರನಗರ, ಮಜೂರು ಗ್ರಾಮೀಣ ಸಮಿತಿ ಅಧ್ಯಕ್ಷ ನಾಗಭೂಷಣ ರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಸಾದಿಕ್  ದಿನಾರ್ ಕೇಂದ್ರ ಸರ್ಕಾರ ದ ವಿರುದ್ಧ ಮಾತಾಡಿದರು. ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ  ಇಮ್ರಾನ್ ಮಜೂರು. ಕಾಪು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಲಕ್ಷಣ   ಪೂಜಾರಿ, ಸಾಬು ಸಾಹೇಬ್ ಮಲ್ಲಾರ್, ಮಜೂರು ಗ್ರಾಮ ಪಂಚಾಯಿತ  ಸದಸ್ಯ  ಭಾಸ್ಕರ ಪೂಜಾರಿ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದಿಲ್ದಾರ್ ಶೇಖ್, ಝಹೀರ್ ಅಹ್ಮದ್ ಬೆಳಪು, ಸವಿತಾ ಕುಂದರ್ ಪಾದೂರು, ಅಯಿರಿನ್  ತಾರ್ವೊ, ಅಬ್ದುಲ್ ಇಲಿಯಾಸ್, ಉನೈಸ್ ಕರಂದಾಡಿ ಅಬ್ದುಲ್ ರಜಾಕ್ ,ಕಾಂಗ್ರೆಸ್ ಪಕ್ಷದ ಬೆಂಬಲಿಗರು ಹಾಜರಿದರು.

ಎರ್ಮಾಳು: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರದ ವಿರುದ್ದ ತೆಂಕ ಎರ್ಮಾಳಿನ  ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಎರ್ಮಾಳು ತೆಂಕ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ  ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಗ್ರಾಮೀಣ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್‍ನ ಅಧ್ಯಕ್ಷ ಶಶಿಧರ ಶೆಟ್ಟಿ ಎಲ್ಲೂರು, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೈನ್ ಸರಕಾರದ ಜನವಿರೋಧಿ ನೀತಿ ವಿರುದ್ಧ ಮಾತನಾಡಿದರು. 

ತೆಂಕ ಗ್ರಾಮ ಪಂಚಾಯತ್ ಸದಸ್ಯ ಬಾಲಚಂದ್ರ, ಅರುಣ ಕುಮಾರಿ, ಮೋಹನ್ ಎಸ್ ಸುವರ್ಣ ಪ್ರಮುಖರಾದ ವಿನ್ಸೆಂಟ್ ಡಿ ಸೋಜ, ಸಂತೋಷ್ ಬಂಗೇರ, ಮುಸ್ತಾಕ್ ಅಹಮದ್, ಉದಯ ಪಂಬದ, ರಾಜು ಪೂಜಾರಿ, ಆಸೀಫ್, ಮುಸ್ತಾಕ್, ರಾಜೇಶ್ ಪೂಜಾರಿ, ಹಫೀಜ್, ಶ್ರೀಧರ್ ಪೂಜಾರಿ, ಅಬ್ದುಲ್ ಶುಕುರ್, ಗಿರೀಶ್ ಮುಂತಾದವರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News