"ಸ್ಥಳೀಯರಲ್ಲದ ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದದ್ದಕ್ಕೆ ಕಾಶ್ಮೀರಿ ವ್ಯಕ್ತಿ ವಿರುದ್ಧ ಕೇಸ್

Update: 2021-06-15 09:49 GMT

ಜಮ್ಮು: ಕೇಂದ್ರಾಡಳಿತ ಜಮ್ಮು ಕಾಶ್ಮಿರದಲ್ಲಿ ಸ್ಥಳೀಯರಲ್ಲದ ಅಧಿಕಾರಿಗಳಿಂದ ತನಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ಹೇಳಿದ ಅಲ್ಲಿನ ನಿವಾಸಿಯೊಬ್ಬನ ವಿರುದ್ಧ "ದ್ವೇಷದ ಭಾವನೆ ಪ್ರೋತ್ಸಾಹಿಸಿದ" ಆರೋಪದ ಮೇಲೆ  ಪ್ರಕರಣ ದಾಖಲಿಸಲಾಗಿದೆ ಎಂದು scroll.in ವರದಿ ಮಾಡಿದೆ.

ಗಂದೆರ್ಬಾಲ್ ಜಿಲ್ಲೆಯ ಸಫಪೋರ ಗ್ರಾಮದ ವಾಣಿ ಮೊಹಲ್ಲ ಪ್ರದೇಶದ ನಿವಾಸಿ 50 ವರ್ಷದ ಸಜದ್ ರಶೋದ್ ಸೋಫಿ ಎಂಬಾತನ ವಿರುದ್ಧ ಪ್ರಕರಣ  ದಾಖಲಿಸಲಾಗಿದೆ. ಜೂನ್ 10ರಂದಿ ಲೆಫ್ಟಿನೆಂಟ್ ಗವರ್ನರ್ ಬಶೀರ್ ಅಹ್ಮದ್ ಖಾನ್ ಅವರು ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಆತ ಹೇಳಿಕೆ ನೀಡಿದ ನಂತರ ಆರಂಭದಲ್ಲಿ ಆತನನ್ನು ಬಂಧಿಸಲಾಗಿತ್ತು ಆದರೆ ಜೂನ್ 21ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆತನಿಗೆ ಜೂನ್ 21ರ ತನಕ ಜಾಮೀನು ನೀಡಿದೆ. ಆದರೂ ಆತನಿಂದ ಶಾಂತಿಗೆ ಭಂಗವಾಗಬಹುದು ಎಂಬ ಕಾರಣ ನೀಡಿ ಪೊಲೀಸರು ಆತನನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು.

ಆತ ಹೇಳಿಕೆ ನೀಡಿದ್ದ ಜೂನ್ 10ರ ಸಭೆಯಲ್ಲಿ  ಗಂದೇರ್ಬಾಲ್ ಜಿಲ್ಲಾಧಿಕಾರಿ ಕೃತ್ತಿಕಾ ಜ್ಯೋತ್ಸ್ನ ಸಹಿತ ಹಲವು ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭ ಸೋಫಿ ನೇತೃತ್ವದ ಗುಂಪೊಂದು ತನ್ನ ಅಹವಾಲು ಮಂಡಿಸುತ್ತಾ "ನೀವೊಬ್ಬ ಕಾಶ್ಮೀರಿ ಹಾಗೂ ನಮ್ಮನ್ನು ಅರ್ಥೈಸುತ್ತೀರಿ ಎಂದು ನಿಮ್ಮಿಂದ ನಾನು ನಿರೀಕ್ಷೆಗಳನ್ನಿಟ್ಟುಕೊಳ್ಳಬಹುದು. ನಾನು ನಿಮ್ಮ ಕಾಲರ್ ಪಟ್ಟಿ  ಹಿಡಿದು ನಿಮ್ಮಿಂದ ಉತ್ತರಗಳನ್ನು ಕೇಳಬಹುದು. ಆದರೆ ಹೊರಗಿನ ಅಧಿಕಾರಿಗಳಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು?" ಎಂದು ಆತ ಕೇಳಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News