ಈಜಿಪ್ಟ್:‌ ಮುಸ್ಲಿಂ ಬ್ರದರ್‌ ಹುಡ್‌ ನ 12 ಹಿರಿಯ ನಾಯಕರಿಗೆ ಮರಣದಂಡನೆ ಎತ್ತಿ ಹಿಡಿದ ನ್ಯಾಯಾಲಯ

Update: 2021-06-15 13:48 GMT
Photo: Reuters 

ಕೈರೋ: ಈಜಿಪ್ಟ್‌ ನ ಅತ್ಯುನ್ನತ ನಾಗರಿಕ ನ್ಯಾಯಾಲಯವು ಮುಸ್ಲಿಂ ಬ್ರದರ್‌ ಹುಡ್‌ ನ 12 ನಾಯಕರಿಗೆ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿದೆ ಎಂದು ನ್ಯಾಯಾಂಗ ಮೂಲಗಳಿಂದ ತಿಳಿದು ಬಂದಿದೆ. ಈ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌ ಸಿಸಿಯ ಅನುಮೋದನೆಯ ಬಳಿಕ ಮರಣದಂಡನೆ ಜಾರಿಗೊಳಿಸಲಾಗುವುದು ಎನ್ನಲಾಗಿದೆ.

ಉನ್ನತ ಇಸ್ಲಾಮಿಕ್‌ ವಿದ್ವಾಂಸ ಅಬ್ದುರ್ರಹ್ಮಾನ್‌ ಅಲ್‌ ಬಾರ್, ಮಾಜಿ ಸಂಸತ್‌ ಸದಸ್ಯ ಮುಹಮ್ಮಸ್‌ ಎಲ್‌ ಬೆಲ್ಟಗಿ ಹಾಗೂ ಮಾಜಿ ಸಚಿವ ಒಸಾಮಾ ಯಾಸೀನ್‌ ಕೂಡ ಈ 12 ಮಂದಿಯಲ್ಲಿ ಸೇರಿದ್ದಾರೆ, 2013ರಲ್ಲಿ ಬ್ರದರ್‌ ಹುಡ್‌ ಅಧ್ಯಕ್ಷ ಮುಹಮ್ಮದ್‌ ಮೊರ್ಸಿಯವರನ್ನು ಸೈನ್ಯವು ಉಚ್ಛಾಟಿಸಿದ ಬಳಿಕ ನಡೆದ ಗಲಭೆಗಳಿಗೆ ಸಂಬಂಧಿಸಿ ಮರಣ ದಂಡನೆ ವಿಧಿಸಲಾಗಿದೆ. 

ಮುರ್ಸಿ ಪದಚ್ಯುತಗೊಂಡ ಕೆಲವೇ ವಾರಗಳಲ್ಲಿ ಕೈರೋದಲ್ಲಿನ ರಬಾ ಅದವಿಯ್ಯ ಚೌಕದಲ್ಲಿ ಬ್ರದರ್‌ ಹುಡ್‌ ಪರ ಬೃಹತ್‌ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಸೇನೆಯು ಮಧ್ಯಪ್ರವೇಶಿಸಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಸೆಪ್ಟೆಂಬರ್‌ 2018ರಲ್ಲಿ ಈಜಿಪ್ಟ್‌ ನ ಕ್ರಿಮಿನಲ್‌ ನ್ಯಾಯಾಲಯವು 75 ಜನರಿಗೆ ಮರಣದಂಡನೆ ವಿಧಿಸಿತ್ತು ಮತ್ತು 600ಕ್ಕೂ ಹೆಚ್ಚು ಮಂದಿಗೆ ಜೈಲು ಶಿಕ್ಷೆ ನೀಡಿತ್ತು. ಒಟ್ಟು 44 ಮಂದಿ ಮೇಲ್ಮನವಿ ಸಲ್ಲಿಸಿದ್ದು. ಮೂವತ್ತೆರಡು ಮಂದಿ ತಮ್ಮ ಶಿಕ್ಷೆಯನ್ನು ಜೈಲುವಾಸಕ್ಕೆ ಬದಲಾಯಿಸಿಕೊಂಡರೆ ಉಳಿದ 12 ಮಂದಿಗೆ ನ್ಯಾಯಾಲಯವು ಮರಣದಂಡನೆ ಎತ್ತಿ ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News