ವಿವಾದಾತ್ಮಕ ಚುನಾವಣಾ ಭಾಷಣ: ಮಿಥುನ್ ಚಕ್ರವರ್ತಿಯನ್ನು ಪ್ರಶ್ನಿಸಿದ ಕೋಲ್ಕತಾ ಪೊಲೀಸರು

Update: 2021-06-16 07:03 GMT

ಹೊಸದಿಲ್ಲಿ: ಬಂಗಾಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಡಿದ ಒಂದು ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿ  ನಟ ಹಾಗೂ  ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿಯವರನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬುಧವಾರ  ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ನಡೆದ ಎಪ್ರಿಲ್-ಮೇ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದ 71 ವರ್ಷದ ನಟ ಬಿಜೆಪಿ  ಪಕ್ಷಕ್ಕೆ ಸೇರಿದ ನಂತರ ಮಾರ್ಚ್ 7 ರಂದು ಮಾಡಿದ ಭಾಷಣಕ್ಕೆ ಸಂಬಂಧಿಸಿ ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸರು ಮಿಥುನ್ ರನ್ನು ಪ್ರಶ್ನಿಸಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ  ತೃಣಮೂಲ ಕಾಂಗ್ರೆಸ್ ಮೇ 2ರಂದು ಪ್ರಕಟವಾದ ಫಲಿತಾಂಶದಲ್ಲಿ  ಭರ್ಜರಿ ಜಯ ಸಾಧಿಸಿದ ನಂತರ ಬಂಗಾಳದಲ್ಲಿ ಚುನಾವಣೋತ್ತರ  ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಈ ಭಾಷಣವು ಮುಖ್ಯ ಪಾತ್ರವಹಿಸಿದೆ ಎಂದು ಮೊದಲ ಮಾಹಿತಿ ವರದಿ (ಎಫ್ಐಆರ್) ಆರೋಪಿಸಿದೆ.

ಎಫ್‌ಐಆರ್ ರದ್ದುಪಡಿಸುವಂತೆ ಕೋರಿ  ಮಿಥುನ್ ಚಕ್ರವರ್ತಿ ಕಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆಗ ನಟನನ್ನು ವರ್ಚುವಲ್ ಆಗಿ  ಪ್ರಶ್ನಿಸುವಂತೆ ನ್ಯಾಯಾಲಯ ತನಿಖಾ ಅಧಿಕಾರಿಗೆ ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News