ಅನೇಕ ಅವಕಾಶ ನೀಡಿದರೂ ಮಾರ್ಗಸೂಚಿಗಳನ್ನು ಪಾಲಿಸಲು ಟ್ವಿಟರ್ ವಿಫಲ:ರವಿಶಂಕರ್ ಪ್ರಸಾದ್

Update: 2021-06-16 07:55 GMT

ಹೊಸದಿಲ್ಲಿ: ಹಲವು ಅವಕಾಶಗಳನ್ನು ನೀಡಿದ್ದರೂ  ಮಾರ್ಗಸೂಚಿಗಳನ್ನು ಪಾಲಿಸಲು ಟ್ವಿಟರ್ ವಿಫಲವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್  ಬುಧವಾರ ಹೇಳಿದ್ದಾರೆ.  ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡ ನಂತರ ರವಿಶಂಕರ್ ಪ್ರಸಾದ್ ಈ ಹೇಳಿಕೆ ನೀಡಿದ್ದಾರೆ.

ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾದ ನಂತರ ಟ್ವಿಟರ್ ಭಾರತದಲ್ಲಿ ಕಾನೂನು ನಷ್ಟ ಪರಿಹಾರವನ್ನು  ಕಳೆದುಕೊಂಡಿತು. ಐಟಿ ನಿಯಮದ ಪ್ರಕಾರ ಟ್ವಿಟರ್ ಭಾರತದಲ್ಲಿ ಪ್ರಮುಖ ಅಧಿಕಾರಿಗಳನ್ನು ನೇಮಿಸುವ ಅಗತ್ಯವಿತ್ತು.

ಗಾಝಿಯಾಬಾದ್ ನಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರು ಹಾಗೂ  ಇಬ್ಬರು ಕಾಂಗ್ರೆಸ್ ಮುಖಂಡರೊಂದಿಗೆ ಟ್ವಿಟರ್ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ.

ಈ ಬೆಳವಣಿಗೆಯನ್ನು ದೃಢಪಡಿಸಿದ  ಕೇಂದ್ರ ಐಟಿ ಮತ್ತು ಕಾನೂನು ಸಚಿವರಾದ ಪ್ರಸಾದ್  "ಈ ವಿಷಯದ ಸರಳ ಸಂಗತಿಯೆಂದರೆ, ಮೇ 26 ರಿಂದ ಜಾರಿಗೆ ಬಂದ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ವಿಫಲವಾಗಿದೆ" ಎಂದು ಹೇಳಿದರು.

ಹೊಸ ಐಟಿ ನಿಯಮಗಳನ್ನು ಅನುಸರಿಸಲು ಟ್ವಿಟರ್‌ಗೆ ಅನೇಕ ಅವಕಾಶಗಳನ್ನು ನೀಡಲಾಗಿದೆ.  ಆದರೆ ಅದು “ಉದ್ದೇಶಪೂರ್ವಕವಾಗಿ ಅನುಸರಿಸದ ಹಾದಿಯನ್ನು ಆರಿಸಿದೆ” ಎಂದು ಸರಣಿ ಟ್ವೀಟ್‌ಗಳಲ್ಲಿ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News