×
Ad

ಕೋಲಾ ಬಾಟಲ್‌ ಪಕ್ಕಕ್ಕಿಟ್ಟ ರೊನಾಲ್ಡೊ: 4 ಬಿಲಿಯನ್‌ ಡಾಲರ್‌ ಕಳೆದುಕೊಂಡ ಕೋಕೊ ಕೋಲಾ ಕಂಪೆನಿ

Update: 2021-06-16 13:21 IST

ನ್ಯೂಯಾರ್ಕ್: ಜಾಗತಿಕ ಕಂಪೆನಿ ಕೊಕೊಕೋಲಾಗೆ ಫುಟ್‌ ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಕಾರಣದಿಂದಾಗಿ 4 ಬಿಲಿಯನ್‌ ಡಾಲರ್‌ ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಕೊ ಕೋಲಾ ಬಾಟಲ್‌ ಗಳನ್ನು ಬದಿಗೆ ಸರಿಸಿದ್ದ ರೊನಾಲ್ಡೋ ನೀರು ಕುಡಿಯಿರಿ ಎಂದು ಹೇಳಿಕೆ ನೀಡಿದ್ದರು. ಹಂಗರಿ ವಿರುದ್ಧದ ಮೊದಲ ಪಂದ್ಯಾಟದಲ್ಲಿ ಭಾಗವಹಿಸುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ರೊನಾಲ್ಡೊ ತೆರಳಿದ್ದ ಸಂದರ್ಭ ಘಟನೆ ನಡೆದಿತ್ತು.

 ನೀರಿನ ಬಾಟಲ್‌ ಅನ್ನು ಕೈಯಲ್ಲಿ ಹಿಡಿದ ರೊನಾಲ್ಡೋ ಪೋರ್ಚುಗೀಸ್‌ ಭಾಷೆಯಲ್ಲಿ ಅಗುವಾ (ನೀರು ಕುಡಿಯಿರಿ) ಎಂದು ಹೇಳಿದ್ದರು. ಆಸ್ಟ್ರೇಲಿಯನ್‌ ಅಸೋಸಿಯೇಟೆಡ್‌ ಪ್ರೆಸ್‌ ವರದಿ ಪ್ರಕಾರ, ರೊನಾಲ್ಡೊ ಅವರ ಈ ಸೂಚನೆಯ ನಂತರ ಷೇರು ಬೆಲೆ $ 56.10 ರಿಂದ. 55.22 ಕ್ಕೆ ಇಳಿದಿದೆ, ಇದು ಶೇಕಡಾ 1.6 ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಕೊಕೊ ಕೋಲಾದ ಮಾರುಕಟ್ಟೆ ಮೌಲ್ಯಮಾಪನವು 242 ಬಿಲಿಯನ್‌ ಡಾಲರ್‌ ನಿಂದ 238 ಬಿಲಿಯನ್‌ ಡಾಲರ್‌ ಗೆ ಕುಸಿತ ಕಂಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News