ಬಂಗಾಳದಲ್ಲಿ ಹಿಂಸಾಚಾರ ಎನ್ನುವುದು 'ಬಿಜೆಪಿಯ ಗಿಮಿಕ್‌ʼ ಅಷ್ಟೇ: ಮಮತಾ ಬ್ಯಾನರ್ಜಿ

Update: 2021-06-17 13:59 GMT

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಬಳಿಕ ನಡೆದಿದೆ ಎನ್ನಲಾದ ಹಿಂಸಾಚಾರದ ಕುರಿತು ಮಮತಾ ವಹಿಸಿದ್ದೀರೆಂದು ಪಶ್ಚಿಮ ಬಂಗಾಳದ ಗವರ್ನರ್‌ ಜಗದೀಪ್‌ ಧಂಖರ್‌ ಮಮತಾ ಬ್ಯಾನರ್ಜಿಗೆ ಪತ್ರ ಕಳುಹಿಸಿರುವ ಬೆನ್ನಲ್ಲೇ ಮಮತಾ ಪ್ರತಿಕ್ರಿಯೆ ನೀಡಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಎಲ್ಲೂ ರಾಜಕೀಯ ಹಿಂಸಾಚಾರಗಳಿಲ್ಲ, ಅದು ಬಿಜೆಪಿಯ ಗಿಮಿಕ್‌ ಅಷ್ಟೇ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಗವರ್ನರ್‌ ಮಾಡಿರುವ ಆರೋಪಗಳು ಸಂಪೂರ್ಣ ಆಧಾರರಹಿತ ಎಂದು ಹೇಳಿದ ಮಮತಾ "ಇದೀಗ ಪಶ್ಚಿಮ ಬಂಗಾಳದಲ್ಲಿ ಯಾವುದೇ ರಾಜಕೀಯ ಹಿಂಸಾಚಾರಗಳು ನಡೆಯುತ್ತಿಲ್ಲ. ಒಂದು ಅಥವಾ ಎರಡು ವಿರಳವಾದ ಘಟನೆಗಳು ನಡೆದಿರಬಹುದು. ಆದರೆ, ಅವುಗಳನ್ನು ರಾಜಕೀಯ ಹಿಂಸಾಚಾರಗಳು ಎಂದು ಲೇಬಲ್‌ ಮಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

"ಕೇಂದ್ರ ಸರಕಾರವು ಟ್ವಿಟರ್‌ ಅನ್ನು ನಿಯಂತ್ರಿಸಲು ಪ್ರಯತ್ನ ನಡೆಸುತ್ತಿದೆ. ಟ್ವಿಟರ್‌ ಮೇಲೆ ಪ್ರಭಾವ ಬೀರಲು ವಿಫಲವಾದ ಕೇಂದ್ರ ಸರಕಾರ ಇದೀಗ ಅದನ್ನು ಕೆಡವಲು ಪ್ರಯತ್ನಿಸುತ್ತಿದೆ" ಎಂದೂ ಅವರು ಕೇಂದ್ರ ಸರಕಾರದ ನಡೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News