ತಿಹಾರ್‌ ಜೈಲಿನಿಂದ ಬಿಡುಗಡೆಗೊಂಡ ದೇವಾಂಗನಾ, ನತಾಶಾ ಮತ್ತು ಆಸಿಫ್‌ ತನ್ಹಾ

Update: 2021-06-17 16:01 GMT

ನವದೆಹಲಿ: ವಿದ್ಯಾರ್ಥಿ-ಕಾರ್ಯಕರ್ತರಾದ ನತಾಶಾ ನರ್ವಾಲ್, ದೇವಂಗಾನ ಕಲಿಟಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರು ದೆಹಲಿಯ ತಿಹಾರ್ ಜೈಲಿನಿಂದ ಇಂದು ಬಿಡುಗಡೆಗೊಂಡರು. ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.

"ಇದು ಸರ್ಕಾರದ ಹತಾಶೆಯನ್ನು ತೋರಿಸುತ್ತದೆ ... ನಾವು ಅವರಿಗೆ ಹೆದರದ ಮಹಿಳೆಯರು" ಎಂದು ದೇವಾಂಗನಾ ಜೈಲಿನಿಂದ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು. "ನಾವು ಸ್ನೇಹಿತರಿಂದ, ಹಿತೈಷಿಗಳಿಂದ ಅಪಾರ ಬೆಂಬಲವನ್ನು ಪಡೆದ ಕಾರಣ ನಾವು ಬದುಕುಳಿದೆವು. ಅವರೆಲ್ಲರಿಗೂ ಧನ್ಯವಾದಗಳು" ಎಂದು ಹೇಳಿದರು.

ನತಾಶಾ ನರ್ವಾಲ್‌ ಅವರು ಈ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿರುವುದರಿಂದ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದರು. "ಆದಾಗ್ಯೂ, ನಾವು ನಂಬಿದ್ದನ್ನು ಎತ್ತಿಹಿಡಿದಿದ್ದಕ್ಕಾಗಿ ದೆಹಲಿ ಹೈಕೋರ್ಟ್‌ಗೆ ಧನ್ಯವಾದ ಹೇಳಲು ನಾವು ಬಯಸುತ್ತೇವೆ. ನಾವು ಮಾಡಿದ ಯಾವುದೇ ಪ್ರತಿಭಟನೆಯು ಭಯೋತ್ಪಾದನೆಯಲ್ಲ. ಇದು ಮಹಿಳೆಯರ ನೇತೃತ್ವದ ಪ್ರಜಾಪ್ರಭುತ್ವ ಪ್ರತಿಭಟನೆಯಾಗಿದೆ" ಎಂದು ನತಾಶಾ ಹೇಳಿದರು.

"ಅವರು ನಮಗೆ ಬೆದರಿಕೆ ಮಾತ್ರ ಹಾಕಬಹುದು. ಅವರು ನಮ್ಮನ್ನು ಸೆರೆಹಿಡಿಯುವ ಬೆದರಿಕೆಯನ್ನೂ ಹಾಕಬಹುದು, ಆದರೆ ಇದು ನಮ್ಮ ಹೋರಾಟವನ್ನು ಮುಂದುವರೆಸುವ  ಸಂಕಲ್ಪವನ್ನು ಬಲಪಡಿಸುತ್ತದೆ" ಎಂದು ನತಾಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News