×
Ad

ʼಬಾಬಾ ಕ ಡಾಬಾʼ ಮಾಲಕನಿಂದ ಆತ್ಮಹತ್ಯೆ ಯತ್ನ: ಆಸ್ಪತ್ರೆಗೆ ದಾಖಲು

Update: 2021-06-18 14:36 IST

ಹೊಸದಿಲ್ಲಿ: ಯೂಟ್ಯೂಬ್‌ ವೀಡಿಯೋವೊಂದರ ಕಾರಣದಿಂದ ಸುಪ್ರಸಿದ್ಧರಾಗಿದ್ದ ಬಾಬಾ ಕ ಡಾಬಾದ ಮಾಲಕ ಕಾಂತ ಪ್ರಸಾದ್‌ (80) ಗುರುವಾರ ರಾತ್ರಿ ಆತ್ಮಹತ್ಯಾ ಪ್ರಯತ್ನ ನಡೆಸಿದ ಕಾರಣ ದಿಲ್ಲಿಯ ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. 

"ಗುರುವಾರದಂದು ಆಸ್ಪತ್ರೆಯಿಂದ ತಕ್ಷಣದ ಕರೆಯೊಂದು ಬಂದಿದ್ದು, ಓರ್ವ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿ ಬಳಿಕ ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ತಿಳಿಸಿದ್ದರು. ಈ ವೇಳೆ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ ವೇಳೆ ಇದು ಕಾಂತಪ್ರಸಾದ್‌ ಎಂದು ತಿಳಿದು ಬಂದಿದೆ. ಅವರು ಈಗ ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಅವರ ಪತ್ನಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

"ಕಾಂತ ಪ್ರಸಾದ್‌ ತಮಗೆ ಸಹಾಯವಾಗಿ ದೊರೆತ ಹಣದಿಂದ ಚೈನೀಸ್‌ ರೆಸ್ಟೋರೆಂಟ್‌ ಅನ್ನು ತೆರೆದಿದ್ದರು. ಇದಕ್ಕೆ ತಿಂಗಳಿಗೆ ಒಂದು ಲಕ್ಷ ರೂ. ಖರ್ಚು ಬರುತ್ತಿತ್ತು. ಆದರೆ ಕೇವಲ 35,000 ವ್ಯಾಪಾರವಾಗುತ್ತಿತ್ತು.ಆದ್ದರಿಂದ ಈ ರೆಸ್ಟೋರೆಂಟ್‌ ಅನ್ನು ಮುಚ್ಚಲಾಗಿತ್ತು" ಎಂದೂ ಅವರ ಪತ್ನಿ ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ, ತನಗೆ ದೊರೆತ ಹಣವನ್ನು ಯೂಟ್ಯೂಬರ್‌ ಗೌರವ್‌ ಕಬಳಿಸುತ್ತಿದ್ದಾರೆಂದು ಪೊಲೀಸ್‌ ಪ್ರಕರಣ ದಾಖಲಿಸಿದ್ದರು. ಬಳಿಕ ಮೊನ್ನೆಯಷ್ಟೇ ಆತ ಕಳ್ಳನಲ್ಲ, ನನ್ನನ್ನು ಕ್ಷಮಿಸಿ ಎಂದು ಸಾಮಾಜಿಕ ತಾಣದಲ್ಲಿ ವೀಡಿಯೋ ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News