ಹಾಂಕಾಂಗ್: ಪತ್ರಿಕೆಯ ಇಬ್ಬರು ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆ

Update: 2021-06-18 13:37 GMT

photo: twitter/@France24_en

ಹಾಂಕಾಂಗ್, ಜೂ. 18: ಹಾಂಕಾಂಗ್ ನ ಪ್ರಜಾಪ್ರಭುತ್ವ ಪರ ಧೋರಣೆಯುಳ್ಳ ‘ಆ್ಯಪಲ್ ಡೇಲಿ’ ಪತ್ರಿಕೆಯ ಇಬ್ಬರು ಉನ್ನತಾಧಿಕಾರಿಗಳ ವಿರುದ್ಧ ಪೊಲೀಸರು ಕಠಿಣ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಶುಕ್ರವಾರ ಮೊಕದ್ದಮೆ ದಾಖಲಿಸಿದ್ದಾರೆ. ಪತ್ರಿಕೆಯು ಪ್ರಕಟಿಸಿರುವ ಲೇಖನಗಳಿಗೆ ಸಂಬಂಧಿಸಿ ಅದರ ಸಂಪಾದಕೀಯ ಕಚೇರಿಗೆ ದಾಳಿ ನಡೆಸಿದ ಒಂದು ದಿನದ ಬಳಿಕ ಮೊಕದ್ದಮೆ ದಾಖಲಾಗಿದೆ.

‘‘ಒಂದು ವಿದೇಶ ಅಥವಾ ವಿದೇಶಿ ಶಕ್ತಿಗಳೊಂದಿಗೆ ಶಾಮೀಲಾಗಿ ದೇಶದ ಭದ್ರತೆಯನ್ನು ಅಪಾಯಕ್ಕೆ ಗುರಿಪಡಿಸಿದ’’ ಆರೋಪವನ್ನು ಪತ್ರಿಕೆಯ ಇಬ್ಬರು ಅಧಿಕಾರಿಗಳ ವಿರುದ್ಧ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮುಖ್ಯ ಸಂಪಾದಕ ರಯಾನ್ ಲಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೆವುಂಗ್ ಕಿಮ್-ಹುಂಗ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.
ಗುರುವಾರ ಪತ್ರಿಕೆಯ ಸಂಪಾದಕೀಯ ಕಚೇರಿಗೆ ನುಗ್ಗಿದ ಸುಮಾರು 500 ಪೊಲೀಸರು, ಕಂಪ್ಯೂಟರ್ ಮತ್ತು ನೋಟ್ ಪ್ಯಾಡ್ಗಳನ್ನು ಹೊತ್ತೊಯ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News