ಯುದ್ಧ, ಬಿಕ್ಕಟ್ಟಿನಿಂದ ನಿರ್ವಸಿತರಾದವರ ಸಂಖ್ಯೆ ದಶಕದಲ್ಲಿ ದ್ವಿಗುಣ: ವಿಶ್ವಸಂಸ್ಥೆ

Update: 2021-06-18 13:43 GMT

photo : twitter/@UN

ಜಿನೀವ (ಸ್ವಿಟ್ಸರ್ಲ್ಯಾಂಡ್), ಜೂ. 18: ಕೊರೋನ ವೈರಸ್ ಸಾಂಕ್ರಾಮಿಕದ ಹೊರತಾಗಿಯೂ, ಯುದ್ಧ ಮತ್ತು ಹಿಂಸಾಚಾರದ ಸ್ಥಳಗಳನ್ನು ತೊರೆದು ಪಲಾಯನಗೈದ ಜನರ ಸಂಖ್ಯೆಯಲ್ಲಿ ಕಳೆದ ವರ್ಷವೂ ಹೆಚ್ಚಳವಾಗಿತ್ತು ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.

ಈ ಸಂಖ್ಯೆ ಕಳೆದ ವರ್ಷ 8.2 ಕೋಟಿಯನ್ನು ತಲುಪಿದ್ದು, ದಶಕದ ಹಿಂದಿನ ಸಂಖ್ಯೆಗಿಂತ ದುಪ್ಪಟ್ಟಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಹೈಕಮಿಶನರ್ ಹೇಳಿದ್ದಾರೆ.
ಜಾಗತಿಕ ನಿರಾಶ್ರಿತರ ಸಂಖ್ಯೆಯು 2019ರಲ್ಲೇ ದಾಖಲೆ ಸೃಷ್ಟಿಸಿತ್ತು. 2020ರಲ್ಲಿ ಸಂಖ್ಯೆಯು ಸುಮಾರು 30 ಲಕ್ಷದಷ್ಟು ಹೆಚ್ಚಾಯಿತು. ಅಂದರೆ ಜಾಗತಿಕ ಜನಸಂಖ್ಯೆಯ ಒಂದು ಶೇಕಡದಷ್ಟು ಜನ ನಿರ್ವಸಿತರಾದಂತೆ ಆಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಹೊಸ ವರದಿ ತಿಳಿಸಿದೆ.

ಸಿರಿಯ, ಅಫ್ಘಾನಿಸ್ತಾನ, ಸೊಮಾಲಿಯ ಮತ್ತು ಯೆಮನ್ ದೇಶಗಳಲ್ಲಿ ಜನರು ಭಾರೀ ಪ್ರಮಾಣದಲ್ಲಿ ನಿರ್ವಸಿತರಾತಗುವುದು ಮುಂದುವರಿದಿದೆ ಎನ್ನುವುದರತ್ತ ವರದಿ ಬೆಟ್ಟು ಮಾಡಿದೆ. ಅದೇ ವೇಳೆ, ಇಥಿಯೋಪಿಯ ಮತ್ತು ಮೊಝಾಂಬಿಕ್ ಗಳಲ್ಲಿ ಹಿಂಸಾಚಾರಗಳು ಭುಗಿಲೆದ್ದಿದ್ದು, ಅಲ್ಲಿಂದಲೂ ಜನ ವಲಸೆ ಹೋಗುತ್ತಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News