ಅಸ್ಸಾಂ :4.2 ತೀವ್ರತೆಯ ಭೂಕಂಪ

Update: 2021-06-19 05:51 GMT
photo: India Tv

ಗುವಾಹಟಿ: ಅಸ್ಸಾಂನಲ್ಲಿ ಶನಿವಾರ ಮುಂಜಾನೆ 4.2 ತೀವ್ರತೆಯ ಭೂಕಂಪನವು ಸಂಭವಿಸಿದೆ.  ಕಳೆದ 24 ಗಂಟೆಗಳಲ್ಲಿ ಈಶಾನ್ಯ ಭಾಗದಲ್ಲಿ ಸಂಭವಿಸಿದ ಐದನೇ ಭೂಕಂಪ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಭೂಕಂಪವು  ಶನಿವಾರ ಬೆಳಿಗ್ಗೆ 1.07 ಕ್ಕೆ ದಾಖಲಾಗಿದ್ದು, ಸೋನಿತ್‌ಪುರ ಜಿಲ್ಲೆಯ ತೇಜ್‌ಪುರದ ಬಳಿ 30 ಕಿ.ಮೀ. ಆಳದಲ್ಲಿ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ವರದಿ ತಿಳಿಸಿದೆ.

ಘಟನೆಯಿಂದ  ಗಾಯ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಶುಕ್ರವಾರ ಮುಂಜಾನೆ 4.1 ತೀವ್ರತೆಯೂ ಸೇರಿದಂತೆ ಎರಡು ಭೂಕಂಪಗಳಿಂದ ರಾಜ್ಯವು ನಡುಗಿತು, ಸೋನಿತ್‌ಪುರ ಜಿಲ್ಲೆ ಭೂಕಂಪದ ಕೇಂದ್ರಬಿಂದುವಾಗಿದೆ.

ಅಸ್ಸಾಂ ಜೊತೆಗೆ, ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ 3 ರಷ್ಟು ತೀವ್ರತೆಯ ಭೂಕಂಪನವು ಶುಕ್ರವಾರ ದಾಖಲಾಗಿದ್ದು, ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ 2.6 ತೀವ್ರತೆಯ ಮತ್ತೊಂದು  ಭೂಕಂಪ ದಾಖಲಾಗಿದೆ.

ಎಪ್ರಿಲ್ 28 ರಂದು 6.4 ತೀವ್ರತೆಯ ಭೂಕಂಪವು ಅಸ್ಸಾಂ ಅನ್ನು ಬೆಚ್ಚಿಬೀಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News