ಮಾಯಾವತಿಯನ್ನು ಅವಹೇಳನಕಾರಿಯಾಗಿ ವ್ಯಾಖ್ಯಾನಿಸಿದ ʼಅರ್ಬನ್ ಡಿಕ್ಷನರಿʼಗೆ ನೆಟ್ಟಿಗರಿಂದ ತರಾಟೆ

Update: 2021-06-19 12:50 GMT

ಲಕ್ನೋ: ಮಾಜಿ ಉತ್ತರ ಪ್ರದೇಶ ಸಿಎಂ ಹಾಗೂ ಬಹುಜನ್ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿಯನ್ನು ಅವಹೇಳನಕಾರಿಯಾಗಿ ವ್ಯಾಖ್ಯಾನಿಸಿ ಪೋಸ್ಟ್ ಮಾಡಿದ ಅರ್ಬನ್ ಡಿಕ್ಷನರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರಕಾರ ಸೈಬರ್ ಘಟಕಕ್ಕೆ ಸೂಚನೆ ನೀಡಿದೆ. ಅರ್ಬನ್ ಡಿಕ್ಷನರಿಯ ಅವಹೇಳನಕಾರಿ ವ್ಯಾಖ್ಯಾನ ಖಂಡಿಸಿ ಸಾಮಾಜಿಕ ಜಾಲತಾಣಿಗರು #ಸಸ್ಪೆಂಡ್‍ಅರ್ಬನ್‍ಡಿಕ್ಷನರಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಅರ್ಬನ್ ಡಿಕ್ಷನರಿ, ಮಾಯಾವತಿಯನ್ನು ವ್ಯಾಖ್ಯಾನಿಸಿ ಹೀಗೆಂದು ಟ್ವೀಟ್ ಮಾಡಿತ್ತು- "ಮಾಯಾವತಿ, ಓರ್ವ ಅವಿವಾಹಿತ ಪೋರ್ನ್ ಸ್ಟಾರ್.  ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡಬಲ್ಲ ಮಹಿಳೆ, ಕಾನ್ಶೀರಾಮ್ ರ ರಹಸ್ಯ ಪತ್ನಿ ಹಾಗೂ ಮುಲಾಯಂ ಸಿಂಗ್ ರ ಮಾಜಿ ಗರ್ಲ್ ಫ್ರೆಂಡ್."

ಈ ಆಕ್ಷೇಪಾರ್ಹ ಟ್ವೀಟ್‍ಗೆ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಸೈಬರ್ ಘಟಕಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ಈ ಹಿಂದೆ ಅರ್ಬನ್ ಡಿಕ್ಷನರಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕುರಿತಂತೆಯೂ ಇದೇ ರೀತಿ ಟ್ವೀಟ್ ಮಾಡಿತ್ತಲ್ಲದೆ "ಅಧಿಕಾರಕ್ಕೆ ಬರಲು ತನ್ನ ಸ್ನೇಹಿತರನ್ನೇ ವಂಚಿಸಿದ ವಂಚಕ" ಎಂದು ಕೇಜ್ರಿವಾಲ್ ಅವರನ್ನು ಅರ್ಬನ್ ಡಿಕ್ಷನರಿ ವ್ಯಾಖ್ಯಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News