ಸುನೀಲ್ ಗವಾಸ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

Update: 2021-06-19 14:46 GMT

ಸೌತಾಂಪ್ಟನ್‌: ನ್ಯೂಝಿಲ್ಯಾಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ 2 ನೇ ದಿನವಾಗಿರುವ ಶನಿವಾರ ಭಾರತದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 7,500 ರನ್ ಗಳಿಸಿದ 9 ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ವಿರಾಟ್ ಕೊಹ್ಲಿ ಅವರು ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ.

ಭಾರತೀಯ ಆಟಗಾರರಲ್ಲಿ ಕೊಹ್ಲಿ ಅವರು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅವರೊಂದಿಗೆ ಜಂಟಿ 4ನೇ ಸ್ಥಾನದಲ್ಲಿದ್ದಾರೆ. ಗವಾಸ್ಕರ್ 7,500 ಟೆಸ್ಟ್ ರನ್ ಗಳಿಸಲು 154 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ತಮ್ಮ 144 ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ನಂತರ ಈ ಪಟ್ಟಿಯಲ್ಲಿ ಸಾರ್ವಕಾಲಿಕ ಶ್ರೇಷ್ಟ ಆಟಗಾರರಾಗಿ ಉಳಿದಿದ್ದಾರೆ. 2019 ರಲ್ಲಿ ವಿರಾಟ್ ಕೊಹ್ಲಿ ಭಾರತೀಯ ನಾಯಕನಾಗಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಸಾಧನೆ ಮಾಡಿದ್ದರು. ಇದರೊಂದಿಗೆ 2,426 ರನ್ ಗಳಿಸಿದ ಸುನೀಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದರು.

ಕಡಿಮೆ ಇನಿಂಗ್ಸ್ ನಲ್ಲಿ 7,500 ಟೆಸ್ಟ್ ರನ್ ಗಳಿಸಿದ ಭಾರತದ ಆಟಗಾರರು

144: ಸಚಿನ್ ತೆಂಡುಲ್ಕರ್

144: ವೀರೇಂದ್ರ ಸೆಹ್ವಾಗ್

148: ರಾಹುಲ್ ದ್ರಾವಿಡ್

154: ವಿರಾಟ್ ಕೊಹ್ಲಿ *

154: ಸುನೀಲ್ ಗವಾಸ್ಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News