ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ :ಭಾರತ 6 ವಿಕೆಟ್ ನಷ್ಟಕ್ಕೆ 182 ರನ್

Update: 2021-06-20 11:20 GMT

ಸೌತಾಂಪ್ಟನ್: ನ್ಯೂಝಿಲ್ಯಾಂಡ್ ವೇಗದ ಬೌಲರ್ ಜಮೀಸನ್ ದಾಳಿಗೆ ತತ್ತರಿಸಿದ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ  79 ಓವರ್ ಗಳ ಅಂತ್ಯದಲ್ಲಿ 182 ರನ್ ಗೆ ಪ್ರಮುಖ 6 ವಿಕೆಟ್ ಗಳನ್ನು ಕಳೆದುಕೊಂಡಿದೆ.

3ನೇ ದಿನದಾಟವಾದ ರವಿವಾರ  ಭಾರತವು 3 ವಿಕೆಟ್  ನಷ್ಟಕ್ಕೆ 143 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿತು. ನಾಯಕ ವಿರಾಟ್ ಕೊಹ್ಲಿ ನಿನ್ನೆಯ ಸ್ಕೋರ್ ಗೆ ಒಂದೂ  ರನ್ ಸೇರಿಸದೆ ಜಮೀಸನ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.  ಕೊಹ್ಲಿ ಔಟಾದ ಬೆನ್ನಿಗೇ ವಿಕೆಟ್ ಕೀಪರ್ ರಿಷಭ್ ಪಂತ್ (4)ಜಮೀಸನ್ ಬೌಲಿಂಗ್ ನಲ್ಲಿ ಲಥಾಮ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 29 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಅಜಿಂಕ್ಯ ರಹಾನೆ 49 ರನ್ ಗಳಿಸಿ ಔಟಾದರು.

ಆಲ್ ರೌಂಡರ್ ಗಳಾದ ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಕ್ರೀಸ್ ಕಾಯ್ದುಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News