ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರಿಗೆ ಪ್ರತಿಷ್ಠಿತ ಯುರೋಪಿಯನ್ ಪ್ರಶಸ್ತಿ

Update: 2021-06-20 11:48 GMT

ಕೊಚ್ಚಿ: ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರಿಗೆ ಸಾರ್ವಜನಿಕ ಆರೋಗ್ಯ ಸೇವೆಗಳ ಬದ್ಧತೆಯನ್ನು ಗುರುತಿಸಿ ಪ್ರತಿಷ್ಠಿತ ಸೆಂಟ್ರಲ್ ಯುರೋಪಿಯನ್ ಯೂನಿವರ್ಸಿಟಿ (ಸಿಇಯು) ಓಪನ್ ಸೊಸೈಟಿ ಪ್ರಶಸ್ತಿ ನೀಡಲಾಗಿದೆ.

ಮುಕ್ತ ಸಮಾಜದ ಆದರ್ಶಗಳನ್ನು ಪೂರೈಸುವ ಅಸಾಧಾರಣ ಭಿನ್ನತೆಯ ವ್ಯಕ್ತಿಗಳಿಗೆ ವರ್ಷಂಪ್ರತಿ ನೀಡಲಾಗುವ ಓಪನ್ ಸೊಸೈಟಿ ಪ್ರಶಸ್ತಿಯನ್ನು ಇತ್ತೀಚೆಗೆ ಆನ್‌ಲೈನ್‌ನಲ್ಲಿ ನಡೆದ 30 ನೇ ಪದವಿ ಪ್ರದಾನ ಸಮಾರಂಭದಲ್ಲಿ ಘೋಷಿಸಲಾಯಿತು

ಸಿಇಯು ಅಧ್ಯಕ್ಷ ಮತ್ತು ರೆಕ್ಟರ್ ಮೈಕೆಲ್ ಇಗ್ನಾಟೀಫ್ ಅವರು ಶೈಲಜಾ ಟೀಚರ್ ಅವರಿಗೆ  ಪ್ರಶಸ್ತಿಯನ್ನು ಘೋಷಿಸಿದರು. ಈ ವರ್ಷದ ಪ್ರಶಸ್ತಿಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳ "ಅಸಾಧಾರಣ ಸಾರ್ವಜನಿಕ ಸೇವಕಿ" ಗೆ ನೀಡಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News