ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ :ಭಾರತ 217 ರನ್ ಗೆ ಆಲೌಟ್

Update: 2021-06-20 13:15 GMT
photo: twitter

ಸೌತಾಂಪ್ಟನ್: ನ್ಯೂಝಿಲ್ಯಾಂಡ್ ವೇಗದ ಬೌಲರ್ ಜಮೀಸನ್ ಮಾರಕ ದಾಳಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ  ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ  ಮೊದಲ ಇನಿಂಗ್ಸ್ ನಲ್ಲಿ 92.1 ಓವರ್ ಗಳಲ್ಲಿ 217 ರನ್ ಗಳಿಸಿ ಆಲೌಟಾಗಿದೆ.

ನ್ಯೂಝಿಲ್ಯಾಂಡ್ ವೇಗದ ಬೌಲರ್ ಜಮೀಸನ್(5-31) ಟೆಸ್ಟ್ ಕ್ರಿಕೆಟ್ ನಲ್ಲಿ 5ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದು ಭಾರತವನ್ನು ಕಾಡಿದರು. ಟ್ರೆಂಟ್ ಬೌಲ್ಟ್ (2-47), ನೀಲ್ ವಾಗ್ನರ್(2-40)  ಹಾಗೂ ಟಿಮ್ ಸೌಥಿ (1-64) ಉಳಿದ  5 ವಿಕೆಟ್ ಗಳನ್ನು ಹಂಚಿಕೊಂಡರು.

3ನೇ ದಿನದಾಟವಾದ ರವಿವಾರ  ಭಾರತವು 3 ವಿಕೆಟ್  ನಷ್ಟಕ್ಕೆ 143 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿತು. ಮಳೆಯಿಂದಾಗಿ ದಿನದಾಟದ ವಿಳಂಬವಾಗಿ ಆರಂಭವಾಯಿತು.

ನಾಯಕ ವಿರಾಟ್ ಕೊಹ್ಲಿ ನಿನ್ನೆಯ ಸ್ಕೋರ್ ಗೆ ಒಂದೂ  ರನ್ ಸೇರಿಸದೆ ಜಮೀಸನ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಕೊಹ್ಲಿ ಔಟಾದ ಬೆನ್ನಿಗೇ ವಿಕೆಟ್ ಕೀಪರ್ ರಿಷಭ್ ಪಂತ್ (4)ಜಮೀಸನ್ ಬೌಲಿಂಗ್ ನಲ್ಲಿ ಲಥಾಮ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 29 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ಅಜಿಂಕ್ಯ ರಹಾನೆ 49 ರನ್ ಗಳಿಸಿ ಔಟಾದರು.

ಆಲ್ ರೌಂಡರ್ ಗಳಾದ ರವೀಂದ್ರ ಜಡೇಜ 22 ಹಾಗೂ ರವಿಚಂದ್ರನ್ ಅಶ್ವಿನ್ 15 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News