ಉದ್ಯೋಗ ಕಳೆದುಕೊಂಡರೆ ಇಪಿಎಫ್ ಖಾತೆಯಿಂದ ಮುಂಗಡ ಪಡೆಯಬಹುದು

Update: 2021-06-20 17:59 GMT

ಹೊಸದಿಲ್ಲಿ,ಜೂ.20: ಒಂದು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯದಿಂದ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿರುವ ಸದಸ್ಯರು ತಮ್ಮ ಪಿಎಫ್ ಖಾತೆಯಿಂದ ಮರಳಿಸಬೇಕಿಲ್ಲದ ಮುಂಗಡವನ್ನು ಪಡೆದುಕೊಳ್ಳಲು ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯು ಅವಕಾಶವನ್ನು ಕಲ್ಪಿಸಿದೆ.

  ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿ ಲಭ್ಯವಿರುವ ಒಟ್ಟು ಮೊತ್ತದ ಶೇ.75ರಷ್ಟು ಮುಂಗಡವನ್ನು ಪಡೆದುಕೊಳ್ಳಬಹದು ಎಂದು ಸಂಸ್ಥೆಯು ಟ್ವೀಟಿಸಿದೆ. ಈ ಸೌಲಭ್ಯವು ಸದಸ್ಯರು ಉದ್ಯೊಗವನ್ನು ಕಳೆದುಕೊಂಡಾಗ ಅವರಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ ಮತ್ತು ಇಪಿಎಫ್ ಖಾತೆಗಳು ಅಂತ್ಯಗೊಳ್ಳುವುದಿಲ್ಲವಾದ್ದರಿಂದ ತಮ್ಮ ಪಿಂಚಣಿ ಸದಸ್ಯತ್ವವನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶವನ್ನು ನೀಡುತ್ತದೆ. ಇಪಿಎಫ್ಒ ಕಳೆದ ಮೇ ತಿಂಗಳಿನಲ್ಲಿ ತನ್ನ ಸದಸ್ಯರು ಎರಡನೇ,ಮರಳಿಸಬೇಕಿಲ್ಲದ ಕೋವಿಡ್-19 ಮುಂಗಡವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿ ಅಧಿಸೂಚನೆಯನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News