ಗುರುವಾಯನಕೆರೆ ಕೇಂದ್ರ ಜುಮಾ ಮಸ್ಜಿದ್ ಗಲ್ಫ್ ಕಮಿಟಿ ಅಸ್ತಿತ್ವಕ್ಕೆ

Update: 2021-06-21 11:36 GMT
ಸಲೀಮ್ ಜಿ.ಕೆ., ಅನ್ವರ್, ಅಬ್ಬಾಸ್ ಬಳಂಜ, ಅಬ್ಬಾಸ್ ಜಿ.ಕೆ

ಬೆಳ್ತಂಗಡಿ : ಹಝ್ರತ್ ಹಯಾತುಲ್ ಅವುಲಿಯಾ ಜುಮಾ ಮಸೀದಿ ಗುರುವಾಯನಕೆರೆ, ಜಮಾಅತ್ ನ ಅಧೀನದಲ್ಲಿ ಬರುವ ಅಲಾದಿ, ಜಿ. ಕೆರೆ, ಕೋಂಟುಪಲ್ಕೆ, ಮೇಲಂತಬೆಟ್ಟು ಹಾಗೂ ಬಳಂಜ ವ್ಯಾಪ್ತಿಯ ಗಲ್ಫ್ ನಿವಾಸಿಗಳ ಸಂಘಟನೆ 'ಗಲ್ಫ್ ಕಮಿಟಿ ಗುರುವಾಯನಕೆರೆ' ಯನ್ನು ಇತ್ತೀಚೆಗೆ ರಚಿಸಲಾಯಿತು.

ಸೌದಿ ಅರೆಬಿಯಾ, ಯುಎಇ, ಕತರ್, ಕುವೈತ್ ‌ಸೇರಿದಂತೆ ಗಲ್ಫ್ ನಲ್ಲಿರುವ ಒಟ್ಟು 35 ಸದಸ್ಯರ ಸಮಿತಿಯನ್ನು ರಚಿಸಲಾಯಿತು.

ಗಲ್ಫ್ ಸಮಿತಿ ಜಿ.ಕೆರೆ ಇದರ ನೂತನ ಅಧ್ಯಕ್ಷರಾಗಿ ಸಲೀಮ್ ಜಿ.ಕೆ., (ಜಿಝಾನ್, KSA) , ಉಪಾಧ್ಯಕ್ಷರಾಗಿ ಅನ್ವರ್ ಮೇಲಂತಬೆಟ್ಟು (ದಮಾಮ್ KSA),  ಪ್ರಧಾನ ಕಾರ್ಯದರ್ಶಿಯಾಗಿ ಕೆಎ ಅಬ್ಬಾಸ್ ಬಳಂಜ (ಕುವೈತ್) , ಜತೆ ಕಾರ್ಯದರ್ಶಿಯಾಗಿ ಅಬ್ಬಾಸ್ ಜಿ.ಕೆ (ಅಲ್ ರಾಸ್ KSA) ಆಯ್ಕೆಯಾದರು.

ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಜಮಾಅತ್ ಕಮಿಟಿ ಅಧ್ಯಕ್ಷರಾದ ಲತೀಫ್ ಹಾಜಿ SMS ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಶಾಫಿ ನಡೆಸಿಕೊಟ್ಟರು.

ಜಮಾಅತ್ ಖತೀಬ್ ಹಾಗೂ ಬೆಳ್ತಂಗಡಿ ತಾಲೂಕು ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಅಸಯ್ಯದ್ ಅಬ್ದುಲ್ ರಹ್ಮಾನ್ ಸಾದತ್ ತಂಙಳ್ ನೂತನ ಗಲ್ಫ್ ಸಮಿತಿಯ ಪದಾಧಿಕಾರಿಗಳಿಗೆ ಶುಭ ಹಾರೈಸಿ ದುವಾ ಆಶೀರ್ವಚನ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News