​ಜೂ. 22: ಸಮಗ್ರ ಪ್ಯಾಕೇಜ್‌ಗಾಗಿ ಜನಾಗ್ರಹ ಆಂದೋಲನದಿಂದ ಪ್ರತಿಭಟನೆ

Update: 2021-06-21 13:18 GMT

ಮಂಗಳೂರು, ಜೂ.21: ಲಾಕ್‌ಡೌನ್‌ನಿಂದಾಗಿ ಜನತೆ ಸಂಕಷ್ಟಕ್ಕೆ ಈಡಾಗಿದೆ. ಸಮಗ್ರ ಪ್ಯಾಕೇಜ್‌ಗಾಗಿ, ತುರ್ತು ಕ್ರಮಗಳಿಗಾಗಿ ಒತ್ತಾಯಿಸಿ ರಾಜ್ಯವ್ಯಾಪಿ ಜೂ.22ರಂದು ಉಸ್ತುವಾರಿ ಸಚಿವರು, ಬಿಜೆಪಿ ಶಾಸಕರ ಕಚೇರಿ ಎದುರು ಖಾಲಿ ಚೀಲಗಳನ್ನು ಸುಟ್ಟು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜನಾಗ್ರಹ ಆಂದೋಲನದ ಪ್ರಕಟನೆ ತಿಳಿಸಿದೆ.

ಕೋವಿಡ್ ಎರಡನೇ ಅಲೆ ಅಪ್ಪಳಿಸಿದಾಗಿನಿಂದ ಅದನ್ನು ಎದುರಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸುವ ಜನಸಾಮಾನ್ಯರ ದನಿಯಾಗಿ ಜನಾಗ್ರಹ ಆಂದೋಲನ ರೂಪು ತಳೆದಿದೆ. ಜನಾಗ್ರಹ, ಜನಪರ ಸಂಘಟನೆಗಳ ಒತ್ತಡದಿಂದಾಗಿ ಎರಡು ಪ್ಯಾಕೇಜ್‌ಗಳನ್ನು ಸರಕಾರ ಘೋಷಿಸಿದೆ. ಆದರೆ ಇವು ಏನಕ್ಕೂ ಸಾಲದ ಅರೆಮನಸ್ಸಿನ ಅರೆಬರೆ ಕ್ರಮಗಳಾಗಿವೆ. ಕೊರೋನದಿಂದ ಬಂಧುಗಳನ್ನು ಕಳೆದುಕೊಂಡು ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಆರ್ಥಿಕತೆ ನೆಲಕಚ್ಚಿದೆ. ದುಡಿಮೆ ಆರಂಭವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇಡೀ ರಾಜ್ಯವೇ ಸರಕಾರವನ್ನು ಒಕ್ಕೊರಲಿನಿಂದ ಪ್ರಶ್ನಿಸಬೇಕಿದೆ. ಸರಕಾರ ಕಾರ್ಯ ಪ್ರವೃತ್ತವಾಗುವಂತೆ ಮಾಡಬೇಕಿದೆ. ಹಸಿದ ಹೊಟ್ಟೆಗಳ ಸಂಕೇತವಾಗಿ ಖಾಲಿ ಚೀಲಗಳನ್ನು ಸುಟ್ಟು ಪ್ರತಿಭಟನೆ ನಡೆಸುತ್ತಿರುವುದಾಗಿ ಜನಾಗ್ರಹ ಆಂದೋಲನದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News