ಹೆಜಮಾಡಿ: ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

Update: 2021-06-22 12:16 GMT

ಪಡುಬಿದ್ರಿ: ತಂದೆ ಮತ್ತು ಮಗ ಹೆಜಮಾಡಿ ಅಳಿವೆ ಬಾಗಿಲಿನ ಬಳಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದ ಅಲೆ ಅಪ್ಪಳಿಸಿ ದೋಣಿ ಮಗುಚಿ ತಂದೆ ಮೃತಪಟ್ಟಟ್ಟಿದ್ದು, ಮಗನನ್ನು ಸ್ಥಳೀಯರು ರಕ್ಷಿಸಿದ ಘಟನೆ ಹೆಜಮಾಡಿ ಕೋಡಿ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ಹೆಜಮಾಡಿ ಕೋಡಿಯ ಮಾನಂಪಾಡಿ ನಿವಾಸಿ ಜಯಂತ್ ಶ್ರೀಯಾನ್ (51) ಮೃತಪಟ್ಟವರು. ಹೆಜಮಾಡಿ ಕೋಡಿಯಿಂದ ಶಾಂಭವಿ-ನಂದಿನ ಸಂಗಮ ಅಳಿವೆ ಬಾಗಿಲಿನಲ್ಲಿ ಮುಂಜಾನೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಜಯಂತ್ ತನ್ನ ಮಗ ತರುಣ್‍ರೊಂದಿಗೆ ಮೀನುಗಾರಿಕೆಯಲ್ಲಿ ನಿರತರಾಗಿದ್ದರು. ಈ ಸಂದರ್ಭ ಬೃಹತ್ ಅಲೆಯೊಂದು ಜಯಂತ್ ಅವರಿದ್ದ ದೋಣಿಗೆ ಬಡಿದಿತ್ತು. ಈ ಸಂದರ್ಭ ಜಯಂತ್ ಮತ್ತು ತರುಣ್ ನೀರಿಗೆ ಬಿದ್ದಿದ್ದರು. ಇದನ್ನು ಗಮನಿಸಿದ ಇನ್ನೊಂದು ದೋಣಿಯಲ್ಲಿದ್ದ ಕರುಣಾಕರ ಕೋಟ್ಯಾನ್ ಮತ್ತು ಮೋಹನ್‍ದಾಸ್ ಎಂಬವರು ತಕ್ಷಣ ನೀರಿಗೆ ಜಿಗಿದು ತರುಣ್‍ನನ್ನು ರಕ್ಷಿಸಿದ್ದು, ಜಯಂತ್‍ರನ್ನು ಅವರು ಮೃತಪಟ್ಟಿದ್ದರು. 

ಮಾನಂಪಾಡಿ ಮೊಗವೀರ ಮಹಾಸಭಾದ ಸಕ್ರಿಯ ಸದಸ್ಯರಾಗಿದ್ದ ಜಯಂತ್‍ ಪತ್ನಿ, 4 ಪುತ್ರರನ್ನು ಅಗಲಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಎಸ್‍ಐ ದಿಲೀಪ್, ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಮತ್ತಿತರರು ಭೇಟಿ ನೀಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News