ಇಂಧನ ದರ ಮತ್ತೆ ಪರಿಷ್ಕೃರಣೆ: ಮುಂಬೈನಲ್ಲಿ ಪೆಟ್ರೋಲ್ ದರ 103.63 ರೂ.

Update: 2021-06-22 07:03 GMT

ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಒಂದು ದಿನದ ವಿರಾಮದ ನಂತರ ಪ್ರತಿ ಲೀಟರ್‌ಗೆ 25 ರಿಂದ 28 ಪೈಸೆ ಹೆಚ್ಚಿಸಿವೆ.

ಮೇ 4 ರ ಬಳಿಕ ಇಂಧನ ಬೆಲೆ 28 ಬಾರಿ ಏರಿಕೆಯಾಗಿದೆ. ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಲಡಾಖ್ ಹಾಗೂ  ಕರ್ನಾಟಕಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ದಾಟಿದೆ.

ಇತ್ತೀಚಿನ ಬೆಲೆ ಪರಿಷ್ಕರಣೆ ನಂತರ  ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 103.63 ರೂ.ಗೆ ಏರಿಕೆಯಾಗಿದೆ. ನಗರದಲ್ಲಿ ಡೀಸೆಲ್ ಬೆಲೆ 95.72 ರೂ.ಗೆ ಏರಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 97.5 ರೂ.ಗೆ ಏರಿದೆ. ಡೀಸೆಲ್ ದರ 88.23 ರೂ.ಗೆ ಏರಿಕೆ ಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 98.65 ಮತ್ತು 92.83 ರೂ. ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಮಂಗಳವಾರ 97.38 ರೂ.ಗೆ ಏರಿದೆ. ನಗರದಲ್ಲಿ ಡೀಸೆಲ್ ಬೆಲೆ 91.08 ರೂ.ತಲುಪಿದೆ.

ಪೆಟ್ರೋಲ್ ಬೆಲೆ 100 ರೂ.ಗಿಂತ ಹೆಚ್ಚಿರುವ ಮತ್ತೊಂದು ಪ್ರಮುಖ ನಗರ ಬೆಂಗಳೂರು. ಮಂಗಳವಾರ ನಗರದಲ್ಲಿ ಪೆಟ್ರೋಲ್ ಬೆಲೆ 100.76 ರೂ.ಗೆ ತಲುಪಿದ್ದರೆ, ಒಂದು ಲೀಟರ್ ಡೀಸೆಲ್ ಬೆಲೆ 93.54 ರೂ.ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News