ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವುದರಿಂದ ಹಿಂದೆ ಸರಿದ ಸುಪ್ರೀಂಕೋರ್ಟ್ ನ ಇಬ್ಬರು ನ್ಯಾಯಾಧೀಶರು

Update: 2021-06-22 07:23 GMT

ಹೊಸದಿಲ್ಲಿ: ನಾರದ ಲಂಚ ಪ್ರಕರಣದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವುದರಿಂದ ಕೋಲ್ಕತ್ತಾದ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರು ಇಂದು ಹಿಂದೆ ಸರಿದಿದ್ದಾರೆ. "ನಾನು ಈ ಪ್ರಕರಣವನ್ನು ಆಲಿಸಲು ಬಯಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಮತ್ತೊಬ್ಬ ನ್ಯಾಯಾಧೀಶರಾದ ಜಸ್ಟಿಸ್ ಹೇಮಂತ್ ಗುಪ್ತಾ ನಂತರ ಪ್ರಕರಣವನ್ನು ಮತ್ತೊಂದು ನ್ಯಾಯಪೀಠದ ಮುಂದೆ ದಾಖಲಿಸುವಂತೆ ರಿಜಿಸ್ಟ್ರಿಯನ್ನು ಕೇಳಿಕೊಂಡರು. ನ್ಯಾಯಮೂರ್ತಿ ವಿನೀತ್ ಸರನ್ ನೇತೃತ್ವದ ನ್ಯಾಯಪೀಠ ಇಂದು ಮಮತಾ ಬ್ಯಾನರ್ಜಿ ಅವರ ಮನವಿಯನ್ನು ಆಲಿಸಲಿದೆ.

ಈ ಹಿಂದೆ, ಕೋಲ್ಕತ್ತಾದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಮೇ 2 ರ ರಾಜ್ಯ ಚುನಾವಣಾ ಫಲಿತಾಂಶದ ನಂತರ ಬಂಗಾಳದ ಕೆಲವು ಭಾಗಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಕೇಸ್ ನಿಂದ ಹೊರಗುಳಿದಿದ್ದರು, ಅದು ಮಮತಾ ಬ್ಯಾನರ್ಜಿಗೆ ಭಾರಿ ಜಯವನ್ನು ನೀಡಿತು.

ನಾರದಾ ಪ್ರಕರಣದಲ್ಲಿ ತಮ್ಮ ಅಫಿಡವಿಟ್‌ಗಳನ್ನು ದಾಖಲಿಸಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಹಾಗೂ ರಾಜ್ಯ ಕಾನೂನು ಸಚಿವ ಮೊಲೊಯ್ ಘಟಕ್ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ರಾಜ್ಯಸರಕಾರದ ಒತ್ತಡದ ಹಿನ್ನೆಲೆಯಲ್ಲಿ ನಾರದಾ ಪ್ರಕರಣವನ್ನು ಬಂಗಾಳದಿಂದ ಸ್ಥಳಾಂತರಿಸುವ ಸಿಬಿಐ ಕೋರಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ  ಕಾನೂನು ಸಚಿವರು ತಮ್ಮ ಅಭಿಪ್ರಾಯ  ಮಂಡಿಸಲು ಅಫಿಡವಿಟ್ ಸಲ್ಲಿಸಲು ಬಯಸಿದ್ದರು.

ಆದರೆ ಸರಿಯಾದ ಸಮಯದಲ್ಲಿ ಅಫಿಡವಿಟ್ ಸಲ್ಲಿಸದಿರುವ ಅಪಾಯವನ್ನು ಅವರಿಬ್ಬರೂ ತೆಗೆದುಕೊಂಡಿದ್ದಾರೆ. ಈಗ ಅವರಿಗೆ  ಅಫಿಡವಿಟ್ ಗಳನ್ನು ಸಲ್ಲಿಸಲು ಅನುಮತಿಸಲಾಗುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News