ಬಾಲಿವುಡ್ ಕುರಿತು ಮಾನಹಾನಿಕರ ವರದಿಗಳನ್ನು ಪ್ರಕಟಿಸುವುದಿಲ್ಲ: ಟೈಮ್ಸ್ ನೌ ಸ್ಪಷ್ಟನೆ

Update: 2021-06-22 17:58 GMT

ಕೋಲ್ಕತಾ, ಜೂ. 22: ಬಾಲಿವುಡ್ ಗೆ ಮಾನಹಾನಿ ಉಂಟಾಗುವ ಯಾವುದನ್ನೂ ತನ್ನ ಸುದ್ದಿ ಸಂಸ್ಥೆ ‘ಟೈಮ್ಸ್ ನೌ’ ಪ್ರಕಟ ಹಾಗೂ ಪ್ರಸಾರ ಮಾಡುವುದಿಲ್ಲ ಎಂದು ‘ದಿ ಟೈಮ್ಸ್ ನೆಟ್ವರ್ಕ್’ ಮಂಗಳವಾರ ಹೇಳಿದೆ. 

‘‘ಬೇಜವಾಬ್ದಾರಿಯುತ ವರದಿ’’ ಎಂದು ಆರೋಪಿಸಿ ರಿಪಬ್ಲಿಕ್ ಟಿ.ವಿ ಹಾಗೂ ಟೈಮ್ಸ್ ನೌ ಹಾಗೂ ಅದರ ಕೆಲವು ನಿರೂಪಕರ ವಿರುದ್ಧ ಚಿತ್ರೋದ್ಯಮದ ಸಂಘಟನೆಗಳು ಹಾಗೂ 34 ನಿರ್ಮಾಪಕರು ಅಕ್ಟೋಬರ್ನಲ್ಲಿ ಕಾನೂನು ಮೊಕದ್ದಮೆ ದಾಖಲಿಸಿದೆ ಬಳಿಕ ‘ದಿ ಟೈಮ್ಸ್ ನೌ ನೆಟ್ವರ್ಕ್’ ಈ ಹೇಳಿಕೆ ನೀಡಿದೆ.

‘ದಿ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ’ ಹಾಗೂ ‘ಟೈಮ್ಸ್ ನೆಟ್ವರ್ಕ್’ ತಮ್ಮ ಜಂಟಿ ಹೇಳಿಕೆಯಲ್ಲಿ, ತಾವು ಪ್ರಕರಣವನ್ನು ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಂಡಿದ್ದೇವೆ ಎಂದು ತಿಳಿಸಿದೆ. ತಮ್ಮ ಒಪ್ಪಿಗೆಯೊಂದಿಗೆ ವಿವಾದಗಳ ಇತ್ಯರ್ಥ ಕೋರಿ ಸಲ್ಲಿಸಲಾದ ಅರ್ಜಿ ದಿಲ್ಲಿ ಉಚ್ಚನ್ಯಾಯಾಲಯದ ಮಂದೆ ಸ್ವೀಕಾರಕ್ಕೆ ಬಾಕಿ ಇದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News