ಲಾಹೋರ್ನಲ್ಲಿ ಸ್ಫೋಟ: 2 ಸಾವು

Update: 2021-06-23 18:04 GMT
photo: twitter/@arfakaindia

ಲಾಹೋರ್ (ಪಾಕಿಸ್ತಾನ), ಜೂ. 23: ಪಾಕಿಸ್ತಾನದ ಲಾಹೋರ್ ನಗರದ ಜನವಸತಿ ಪ್ರದೇಶವೊಂದರಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 17 ಮಂದಿ ಗಾಯಗೊಂಡಿದ್ದಾರೆ.

ಲಾಹೋರ್ ನ ಜೋಹರ್ ಪಟ್ಟಣದಲ್ಲಿರುವ ಆಸ್ಪತ್ರೆಯೊಂದರ ಸಮೀಪ ಸ್ಫೋಟ ಸಂಬವಿಸಿದೆ. ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 17 ಮಂದಿ ಗಾಯಗೊಂಡಿದ್ದಾರೆ ಎಂದು ಲಾಹೋರ್ನ ಪೊಲೀಸ್ ಅಧಿಕಾರಿಯೊಬ್ಬರು ಆರಿ ನ್ಯೂಸ್ಗೆ ಹೇಳಿದ್ದಾರೆ.

ಸ್ಫೋಟದ ಕಾರಣ ಇನ್ನಷ್ಟೇ ಗೊತ್ತಾಗಬೇಕಾಗಿದೆ ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News