×
Ad

"ಲಸಿಕೆ ಪಡೆಯದವರು ಬಂಧನಕ್ಕೊಳಗಾಗಿ ಅಥವಾ ಭಾರತಕ್ಕೆ ಹೋಗಿ": ಫಿಲಿಪೀನ್ಸ್‌ ಅಧ್ಯಕ್ಷ ಹೇಳಿಕೆ

Update: 2021-06-24 12:52 IST

"ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸುವವರನ್ನು ಬಂಧಿಸಲಾಗುವುದು ಎಂದು ಫಿಲಿಪೀನ್ಸ್‌ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಹೇಳಿದ್ದಾರೆ. ಅವರು ಆನ್‌ ಲೈನ್‌ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದರು. "ವ್ಯಾಕ್ಸಿನ್‌ ಪಡೆಯಲು ನಿರಾಕರಿಸುವವರು ಭಾರತಕ್ಕೆ ಹೋಗಿ ಅಥವಾ ಅಮೆರಿಕಕ್ಕೆ ತೆರಳಿ" ಎಂದು ಅವರು ಹೇಳಿದ್ದಾಗಿ indiatoday.in  ವರದಿ ಮಾಡಿದೆ.

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ, ರೊಡ್ರಿಗೋ ಡುಟರ್ಟೆ, “ನನ್ನನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ಈ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಇದೆ. ನೀವು ಲಸಿಕೆ ಪಡೆಯಲು ಬಯಸದಿದ್ದರೆ, ನಾನು ನಿಮ್ಮನ್ನು ಬಂಧಿಸುತ್ತೇನೆ. ಮತ್ತು ನಾನು ನಿಮ್ಮ ಹಿಂಬದಿಗೆ ಲಸಿಕೆಯನ್ನು ಚುಚ್ಚುತ್ತೇನೆ. ನೀವು ಕೀಟಗಳು. ನಾವು ಈಗಾಗಲೇ ಬಳಲುತ್ತಿದ್ದೇವೆ ಮತ್ತು ನೀವು ಹೊರೆಯನ್ನು ಹೆಚ್ಚಿಸುತ್ತಿದ್ದೀರಿ.” ಎಂದು ಹೇಳಿಕೆ ನೀಡಿದ್ದಾರೆ.

"ಫಿಲಿಪೀನ್ಸ್‌ ನಿವಾಸಿಗಳೇ ದಯವಿಟ್ಟು ಕೇಳಿ. ನನ್ನ ಕೈಗಳನ್ನು ನೀವು ಈ ಕೆಲಸ ಮಾಡಲು ಬಲವಂತ ಮಾಡಬೇಡಿ. ನನಗೆ ಬಲವಾದ ತೋಳುಗಳಿವೆ. ಯಾರೂ ಅದನ್ನು ಇಷ್ಟಪಡುವುದಿಲ್ಲ. ನೀವು ಲಸಿಕೆ ಪಡೆಯದಿದ್ದರೆ ಫಿಲಿಪೀನ್ಸ್‌ ದೇಶವನ್ನು ಬಿಟ್ಟು ಹೋಗಿ ಭಾರತಕ್ಕೆ ಹೋಗಿ ಅಥವಾ ಅಮೆರಿಕಕ್ಕೆ ಹೋಗಿ. ಆದರೆ ನೀವು ಇಲ್ಲಿ ಇದ್ದು ವೈರಸ್‌ ಅನ್ನು ಸೋಂಕಿಸುವ ಮನುಷ್ಯರಾಗಿದ್ದೀರಿ. ದಯವಿಟ್ಟು ಲಸಿಕೆ ಪಡೆದುಕೊಳ್ಳಿ" ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News