ಅಲೋಪತಿ ಬಗ್ಗೆ ಟೀಕೆ: ರಾಮ್‌ ದೇವ್ ವಿರುದ್ಧ ಕೇಸು ದಾಖಲಿಸುವಂತೆ ಐಎಂಎನಿಂದ ಪೊಲೀಸ್ ವರಿಷ್ಠರಿಗೆ ಪತ್ರ

Update: 2021-06-24 15:59 GMT

ಡೆಹ್ರಾಡೂನ್, ಜೂ. 24: ಅಲೋಪತಿ ಬಗ್ಗೆ ನೀಡಿದ ಹೇಳಿಕೆಗೆ ಯೋಗ ಗುರು ರಾಮದೇವ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಉತ್ತರಾಖಂಡದ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಬುಧವಾರ ಆಗ್ರಹಿಸಿದ್ದಾರೆ.

ಅಲೋಪತಿಯವನ್ನು ‘ಮೂರ್ಖ ವಿಜ್ಞಾನ’ ಎಂದು ಕರೆದ ರಾಮ್ ದೇವ್ ಅವರಿಗೆ ಉತ್ತರಾಖಂಡದ ಭಾರತೀಯ ವೈದ್ಯಕೀಯ ಸಂಘ ಕಳೆದ ತಿಂಗಳು ಮಾನನಷ್ಟ ಮೊಕದ್ದಮೆ ನೋಟಿಸು ರವಾನಿಸಿತ್ತು.

ಡಿಜಿಪಿ ಅಶೋಕ್ ಕುಮಾರ್ ಅವರಿಗೆ ರವಾನಿಸಿದ ಪತ್ರದಲ್ಲಿ ಸಂಘದ ಮುಖ್ಯಸ್ಥ ಅಜಯ್ ಖನ್ನಾ ಅವರನ್ನು ಪ್ರತಿನಿಧಿಸಿದ ನ್ಯಾಯವಾದಿ, ವೈದ್ಯಕೀಯ ಭ್ರಾತೃತ್ವದಲ್ಲಿರುವವರನ್ನು ಅವಮಾನ ಮಾಡಿರುವುದರಿಂದ ಯೋಗ ಗುರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ರಾಮದೇವ್ ಅವರು ಹಲವು ಸಂದರ್ಭಗಳಲ್ಲಿ ಅಲೋಪತಿ ಬಗ್ಗೆ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಹಲವು ರಾಜ್ಯ ಘಟಕಗಳು ಅವರ ವಿರುದ್ಧ ದೂರು ದಾಖಲಿಸಿವೆ.

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅಲೋಪತಿ ಪದ್ಧತಿ ಬಳಸುತ್ತಿರುವುದರ ಬಗ್ಗೆ ರಾಮದೇವ್ ಅವರ ನೀಡಿದ ಹೇಳಿಕೆಯನ್ನು ಅಲೋಪತಿ ತಜ್ಞರು ಟೀಕಿಸಿದ್ದಾರೆ. ಎಫ್ಐಆರ್ಗೆ ಸಂಬಂಧಿಸಿದ ವಿಚಾರಣೆಯನ್ನು ತಡೆಯುವಂತೆ ಕೋರಿ ರಾಮದೇವ್ ಅವರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.

‘‘ಅಲೋಪತಿಯಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಇವರ ಸಂಖ್ಯೆ ಚಿಕಿತ್ಸೆ ಅಥವಾ ಆಮ್ಲಜನಕ ಸಿಗದ ಕಾರಣಕ್ಕೆ ಸಾವನ್ನಪ್ಪಿದವರ ಸಂಖ್ಯೆಗಿಂತ ಹೆಚ್ಚು’’ ಎಂದು ಕಾರ್ಯಕ್ರಮವೊಂದರಲ್ಲಿ ರಾಮದೇವ್ ಅವರು ಹೇಳುತ್ತಿರುಂತೆ ಕೇಳುವ ವೀಡಿಯೊ ಕಳೆದ ತಿಂಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News