ಪ್ರಧಾನಿ ಮೋದಿಯನ್ನು'153 ದೇಶಗಳ ಅಧ್ಯಕ್ಷರನ್ನಾಗಿಸಲಾಗಿದೆ' ಎಂಬ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಹಳೆಯ ವೀಡಿಯೋ ವೈರಲ್

Update: 2021-06-25 10:40 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವೇದಿಕೆಯೊಂದಕ್ಕೆ ಆಗಮಿಸುವುದು ಹಾಗೂ  ಸಭಿಕರು ಭಾರೀ ಕರತಾಡನ ಮಾಡುತ್ತಿರುವ ವೀಡಿಯೋವೊಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಮೋದಿ ಅವರನ್ನು '153 ದೇಶಗಳ ಅಧ್ಯಕ್ಷರನ್ನಾಗಿ' ನೇಮಕ ಮಾಡಲಾಗಿದೆ ಎಂಬ ಪೋಸ್ಟ್ ಕೂಡ ಮಾಡಲಾಗಿದೆ.

"ಪ್ರಧಾನಿ ಮೋದಿಯ ದ್ವೇಷಿಗಳು ಈ ವೀಡಿಯೋ ನೋಡಲು ಸಾಧ್ಯವಿಲ್ಲ  ಹಾಗೂ ಮೋದಿ ಅಭಿಮಾನಿಗಳು ಈ ವೀಡಿಯೋವನ್ನು ಲೈಕ್ ಮತ್ತು ಶೇರ್ ಮಾಡದೆ ಕೆಳಗೆ ಸ್ಕ್ರೋಲ್ ಮಾಡುವುದಿಲ್ಲ" ಎಂದೂ ಈ ವೀಡಿಯೋ ಜತೆಗೆ ಪೋಸ್ಟ್ ಮಾಡಲಾಗಿದೆ.

ಈ ವೀಡಿಯೋದ ರಿವರ್ಸ್ ಇಮೇಜ್ ಸರ್ಚ್ ಅನ್ನು ಆಲ್ಟ್ ನ್ಯೂಸ್ ಯಾಂಡೆಕ್ಸ್ ನಲ್ಲಿ ಮಾಡಿದಾಗ ಇದೇ ವೀಡಿಯೋ ಯುಟ್ಯೂಬ್‍ನಲ್ಲಿ 2018ರಲ್ಲಿ ಅಪ್‍ಲೋಡ್ ಆಗಿರುವುದು ತಿಳಿಯುತ್ತದೆ. ಮೂಲ ವೀಡಿಯೋ ಕ್ಲಿಪ್ ಅನ್ನು ನರೇಂದ್ರ ಮೋದಿಯ ಅಧಿಕೃತ ಯುಟ್ಯೂಬ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ. 

ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿರುವ ಎಸ್‍ಎಪಿ ಸೆಂಟರ್‍ನಲ್ಲಿ ಭಾರತೀಯ ಅಮೆರಿಕನ್ ಸಮುದಾಯವನ್ನು ಪ್ರದಾನಿ ಮೋದಿ ಸೆಪ್ಟೆಂಬರ್ 2015ರಲ್ಲಿ ಉದ್ದೇಶಿಸಿ ಮಾತನಾಡಿದ ಈ ಕಾರ್ಯಕ್ರಮದ ನೇರ ಸ್ಟ್ರೀಮಿಂಗ್ ಕೂಡ ನಡೆದಿತ್ತು.

ವೈರಲ್ ವೀಡಿಯೋದ ಜತೆಗಿನ ಶೀರ್ಷಿಕೆಯಲ್ಲಿ ಮೋದಿಯನ್ನು 153 ದೇಶಗಳ ಅಧ್ಯಕ್ಷರನ್ನಾಗಿಸಲಾಗಿದೆ ಎಂಬುದು ಅಸಂಬದ್ಧ. ಇಂತಹ ಯಾವುದೇ ಹುದ್ದೆಯಿಲ್ಲ ಎಂದು ವರದಿ ಉಲ್ಲೇಖಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News