×
Ad

ಕೊರೋನ ಲಸಿಕಾ ಅಭಿಯಾನದಲ್ಲಿ ಖಾಲಿ ಸಿರಿಂಜ್‌ ಚುಚ್ಚಿದ ನರ್ಸ್:‌ ವೀಡಿಯೊ ವೈರಲ್‌

Update: 2021-06-25 15:10 IST

ಪಾಟ್ನಾ: ಬಿಹಾರದ ಚಾಪ್ರಾದಲ್ಲಿ ಕೊರೋನ ವಿರುದ್ದ ಲಸಿಕೆ ಪಡೆಯಲು ಹೋದ ವ್ಯಕ್ತಿಯೊಬ್ಬರಿಗೆ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ದಾದಿಯೊಬ್ಬರು ಖಾಲಿ ಸಿರಿಂಜ್ ಚುಚ್ಚಿದ್ದಾರೆ. ವೈರಲ್ ಆಗಿರುವ ವೀಡಿಯೊವೊಂದರಲ್ಲಿ  ನರ್ಸ್ ಇತರರೊಂದಿಗೆ ಮಾತನಾಡುತ್ತಾ, ಯಾವುದೇ ಡೋಸ್ ಇಲ್ಲದ ಸಿರಿಂಜನ್ನು  ಚುಚ್ಚುತ್ತಿರುವುದು ಕಂಡುಬಂದಿದೆ. .

ಜೂನ್ 21 ರಂದು ಬಾಡಾ ಇಮಾಂಬರಾ ಪ್ರದೇಶದ ಬಳಿಯ ಚಾಪ್ರಾ ನಗರದ ವಾರ್ಡ್ ನಂಬರ್ 1 ರಲ್ಲಿ ಈ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿವೀಡಿಯೊ ಹರಡುತ್ತಿದ್ದಂತೆ ಎಡವಟ್ಟು ಮಾಡಿರುವ  ದಾದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಯುವಕನಿಗೆ ಸಿರಿಂಜ್ ನಲ್ಲಿ ಚುಚ್ಚುಮದ್ದು ನೀಡುತ್ತಿರುವಾಗ, ಆತನ ಸ್ನೇಹಿತ ಲಸಿಕೆ ಪಡೆಯುವ ವೀಡಿಯೊವನ್ನು ಹತ್ತಿರದಲ್ಲಿ ನಿಂತು ಚಿತ್ರೀಕರಿಸಿದ್ದ. ಇದರಿಂದಾಗಿ ಈ ದೃಶ್ಯವು ವೈರಲ್ ಆಗಿದೆ.

ದಾದಿ ಚಂದಾ ಕುಮಾರಿಗೆ (48) ಶೋಕಾಸ್ ನೋಟಿಸ್ ನೀಡಲಾಗಿದೆ ಹಾಗೂ  48 ಗಂಟೆಗಳ ಒಳಗೆ ವಿವರಣೆ ನೀಡುವಂತೆ ಕೋರಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸರನ್ ಅವರ ಜಿಲ್ಲಾ ರೋಗನಿರೋಧಕ ಅಧಿಕಾರಿ (ಡಿಐಒ) ಡಾ.ಅಜಯ್ ಕುಮಾರ್ ತಿಳಿಸಿದ್ದಾರೆ.

ತಪ್ಪು ಮಾಡಿರುವ ದಾದಿಯನ್ನು ಸಹ ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಆದರೆ, ದಾದಿ ಉದ್ದೇಶಪೂರ್ವಕವಾಗಿ ಈ ತಪ್ಪು ಮಾಡಿಲ್ಲ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಜನದಟ್ಟಣೆ ಇತ್ತು. ಹೀಗಾಗಿ ತರಾತುರಿಯಲ್ಲಿ ಅವರು  ಖಾಲಿ ಸಿರಿಂಜ್ ಚುಚ್ಚಿದ್ದಾರೆ ಎಂದು  ಡಾ. ಅಜಯ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News