×
Ad

ಟ್ವಿಟರ್‌ ನನ್ನ ಖಾತೆಗೆ 1 ಗಂಟೆಗಳ ಕಾಲ ಪ್ರವೇಶ ನಿರಾಕರಿಸಿತ್ತು: ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಆರೋಪ

Update: 2021-06-25 17:47 IST

ಹೊಸದಿಲ್ಲಿ: ಅಮೆರಿಕಾದ ಡಿಜಿಟಲ್‌ ಮಿಲೇನಿಯಮ್‌ ಕಾಪಿರೈಟ್‌ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಟ್ವಿಟರ್‌ ತನ್ನ ಖಾತೆಗೆ ಸುಮಾರು ಒಂದು ಗಂಟೆಗಳ ಕಾಲ ಪ್ರವೇಶ ನಿರಾಕರಿಸಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಕೆಲ ಸಮಯಗಳ ಬಳಿಕ ಖಾತೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

"ಸ್ನೇಹಿತರೇ! ಇಂದು ವಿಚಿತ್ರವಾದ ಘಟನೆಯೊಂದು ಸಂಭವಿಸಿದೆ. ಯುಎಸ್‌ಎಯ ಡಿಜಿಟಲ್‌ ಮಿಲೇನಿಯಮ್‌ ನ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಸುಮಾರು ಒಂದು ಗಂಟೆಗಳ ಕಾಲ ಟ್ವಿಟರ್‌ ನನಗೆ ಖಾತೆ ಪ್ರವೇಶಿಸಲು ಅವಕಾಶ ನಿರಾಕರಿಸಿತು. ಬಳಿಕ ನನಗೆ ಖಾತೆಗೆ ಪ್ರವೇಶಿಸಲು ಅನುಮತಿ ನೀಡಲಾಯಿತು" ಎಂದು ಕೆಲ ಸ್ಕ್ರೀನ್‌ ಶಾಟ್‌ ಗಳೊಂದಿಗೆ ಅವರು ಟ್ವೀಟ್‌ ಮಾಡಿದ್ದಾರೆ. 

ನಾನು ಟ್ವಿಟರ್‌ ನ ʼಅನಿಯಂತ್ರಿತ ಕ್ರಮಗಳುʼ ಮತ್ತು ʼಉನ್ನತ ಕೈʼಗಳ ಕುರಿತಾದಂತೆ ಇತ್ತೀಚೆಗೆ ಉಲ್ಲೇಖಿಸಿದ್ದೇ ಟ್ವಿಟರ್‌ ನ ಗರಿಗೆದರಲು ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೇ, ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್‌ ಏಕೆ ನಿರಾಕರಿಸುತ್ತಿದೆ ಎನ್ನುವುದು ನನಗೆ ಈಗ ಸ್ಪಷ್ಟವಾಗಿದೆ. ಏಕೆಂದರೆ ಟ್ವಿಟರ್‌ ಇದನ್ನು ಅನುಸರಿಸಿದರೆ ಅದರ ಕಾರ್ಯಸೂಚಿಗೆ ಸರಿಹೊಂದದ ವ್ಯಕಿಯ ಖಾತೆಗೆ ಪ್ರವೇಶವನ್ನು ಅನಿಯಂತ್ರಿತವಾಗಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News