ನೆಟ್ಲಮುಡ್ನೂರು ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಟ್ಯಾಂಕ್ ಗೆ ಶಿಲಾನ್ಯಾಸ

Update: 2021-06-25 17:00 GMT

ವಿಟ್ಲ : ಜೂ. 25, ಮಾಣಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ನೆಟ್ಲಮುಡ್ನೂರು ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ರೂ 1.63 ಕೋಟಿಯ  6 ನೀರಿನ ಟ್ಯಾಂಕ್ ಗೆ ನೇರಳಕಟ್ಟೆಯ  ಭಜನಾ ಮಂದಿರದ ಬಳಿ ಜಿ.ಪಂ.ಮಾಜಿ ಸದಸ್ಯೆ ಮಂಜುಳಾ ಮಾದವ ಮಾವೆ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು  ಮಾಣಿ ಜಿ.ಪಂ ಕ್ಷೇತ್ರಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಒಟ್ಟು 411.72 ಕೋಟಿ ಅನುದಾನ ಮಂಜೂರಾಗಿದ್ದು ಈ ಪೈಕಿ ನೆಟ್ಲಮುಡ್ನೂರು ಗ್ರಾಮದಲ್ಲಿ ರೂ. 1.63 ವೆಚ್ಚದಲ್ಲಿ 6 ಟ್ಯಾಂಕ್ ಗಳು ನಿರ್ಮಾಣ ಗೊಳ್ಳಲಿದೆ ಎಂದರು.

ಈ ಸಂದರ್ಭ ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷ ಸತೀಶ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ ಪೂಜಾರಿ, ಸದಸ್ಯರುಗಳಾದ ಲತೀಫ್ ನೇರಳಕಟ್ಟೆ, ಅಶೋಕ ರೈ, ಜಯಂತಿ ಪೂಜಾರಿ, ಶಾಲಿನಿ ಹರೀಶ್, ಮಾಜಿ ಸದಸ್ಯ ಡಿ.ತನಿಯಪ್ಪ ಗೌಡ ಹಾಗೂ ಹರೀಶ ಅಲಂಗಾಜೆ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News