×
Ad

ರವಿಶಂಕರ್ ಪ್ರಸಾದ್ ಬಳಿಕ ಶಶಿ ತರೂರ್ ಟ್ವಿಟರ್ ಖಾತೆಯೂ ತಾತ್ಕಾಲಿಕವಾಗಿ ಸ್ಥಗಿತ

Update: 2021-06-25 22:47 IST

ಹೊಸದಿಲ್ಲಿ,ಜೂ.25: ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ ಅವರ ಸ್ವಂತ ಟ್ವಿಟರ್ ಖಾತೆಗೆ ಪ್ರವೇಶ ಶುಕ್ರವಾರ ತಾತ್ಕಾಲಿಕವಾಗಿ ನಿರಾಕರಿಸಲ್ಪಟ್ಟ ನಂತರ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,ತನ್ನ ಟ್ವಿಟರ್ ಖಾತೆಯಲ್ಲಿಯೂ ಇದೇ ಸಮಸ್ಯೆ ಎದುರಾಗಿತ್ತು ಎಂದು ತಿಳಿಸಿದ್ದಾರೆ.

ತನ್ನ ಪ್ರಕರಣ ಪ್ರಸಾದರಿಗಿಂತ ಭಿನ್ನವಾಗಿತ್ತು. ‘ರಾಸ್ಫುಟಿನ್’ಹಾಡನ್ನೊಳಗೊಂಡಿದ್ದ ನೃತ್ಯದ ವೀಡಿಯೊವೊಂದನ್ನು ತಾನು ಪೋಸ್ಟ್ ಮಾಡಿದ್ದು ಕಾಪಿರೈಟ್ ಉಲ್ಲಂಘನೆಗಾಗಿ ತನ್ನ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಹಾಡಿನ ಹಕ್ಕುಗಳ ರಕ್ಷಣೆಯ ಹೊಣೆ ಹೊತ್ತಿರುವ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ದಿ ಫೋನೊಗ್ರಾಫಿಕ್ ಇಂಡಸ್ಟ್ರಿಯು ಈ ಬಗ್ಗೆ ಡಿಜಿಎಂಎ ಅಡಿ ದೂರನ್ನು ದಾಖಲಿಸಿತ್ತು. ವಿಪರ್ಯಾಸವೆಂದರೆ ಭಾರತದಲ್ಲಿ ಅವರ ಹಿಂದಿನ ಸಮ್ಮೇಳನದಲ್ಲಿ ತಾನು ಮುಖ್ಯ ಭಾಷಣಕಾರನಾಗಿದ್ದೆ ಎಂದು ತರೂರ್ ಟ್ವೀಟಿಸಿದ್ದಾರೆ.

ಪ್ರಸಾದರಂತೆ ತಾನು ಇದಕ್ಕಾಗಿ ಟ್ವಿಟರ್ ಅನ್ನು ದೂರಿರಲಿಲ್ಲ. ಅಮೆರಿಕದ ಡಿಜಿಟಲ್ ಮಿಲೆನಿಯಂ ಕಾಪಿರೈಟ್ ಕಾಯ್ದೆ (ಡಿಜಿಎಂಎ)ಯ ನೋಟಿಸ್,ಅದು ಎಷ್ಟೇ ಮೂರ್ಖತನದ್ದಾಗಿದ್ದರೂ ಅದನ್ನು ಪಾಲಿಸದೆ ಟ್ವಟರ್ ಗೆ ಗತ್ಯಂತರವಿಲ್ಲ ಎಂದಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನ ಕುರಿತು ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ ತನ್ನ ಮತ್ತು ಪ್ರಸಾದ್ ಅವರ ಖಾತೆಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಟ್ವಿಟರ್ನಿಂದ ವಿವರಣೆಯನ್ನು ಕೋರುವುದಾಗಿ ತರೂರ್ ತಿಳಿಸಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News