ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ 'ಮಾದಕ ದ್ರವ್ಯ' ಜಾಗೃತಿ ಅಭಿಯಾನ

Update: 2021-06-26 10:21 GMT

ಮುಡಿಪು, ಜೂ.26: ವಿಶ್ವ ಮಾದಕ ಪದಾರ್ಥ ಸೇವನೆ ನಿಷೇಧ ದಿನದ ಪ್ರಯುಕ್ತ ಜಾಗೃತಿ ಅಭಿಯಾನ ಕಾರ್ಯಕ್ರಮವು ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಮುಡಿಪು ಡಿವಿಷನ್ ಯೂಟ್ಯೂಬ್ ಚಾನೆಲ್ ನಲ್ಲಿ ಇಂದು (ಜೂ.26) ರಾತ್ರಿ 8 ಗಂಟೆಗೆ ನಡೆಯಲಿದೆ

ಕಾರ್ಯಕ್ರಮದಲ್ಲಿ ಇಬ್ರಾಹಿಂ ಅಹ್ಸನಿ ಮಂಜನಾಡಿ ದುಆ ನೆರವೇರಿಸಲಿದ್ದಾರೆ. ಮನ್ಸೂರ್ ಹಿಮಮಿ ಅಧ್ಯಕ್ಷತೆ ವಹಿಸಲಿದ್ದು, ಎಸ್ಸೆಸ್ಸೆಫ್ ದ.ಕ. ಜಿಲ್ಲಾ(ವೆಸ್ಟ್) ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಬಜ್ಪೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಬಂಟ್ವಾಳ ಪೋಲಿಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ .ಎಮ್.ಎಸ್ ‘ಮಾದಕ ದ್ರವ್ಯ ಮುಕ್ತ ಸಮಾಜದ ಏಳಿಗೆ’ ಬಗ್ಗೆ ವಿಷಯ ಮಂಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯ, ಜಿಲ್ಲಾ ಎಸ್ಸೆಸ್ಸೆಫ್ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಪ್ರ.ಕಾರ್ಯದರ್ಶಿ ನೌಷಾದ್ ಮದನಿ ಎಚ್.ಕಲ್ಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News