​ಸಾರ್ವಜನಿಕ ಸ್ಥಳ ಪ್ರವೇಶಿಸಬೇಕಾದರೆ ಈ ರಾಜ್ಯದಲ್ಲಿ ಲಸಿಕೆ ಕಡ್ಡಾಯ

Update: 2021-06-27 04:41 GMT
ಫೈಲ್ ಫೋಟೊ

ಜೈಪುರ : ರಾಜಸ್ಥಾನದಲ್ಲಿ ಜೂ. 28ರಿಂದ ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಬೇಕಾದರೆ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.

ಕೋವಿಡ್-19 ನಿರ್ಬಂಧಗಳ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿರುವ ಗೆಹ್ಲೋಟ್ ಸರ್ಕಾರ, ಈ ಅಂಶವನ್ನು ಹೊಸ ಮಾರ್ಗಸೂಚಿಯಲ್ಲಿ ಸೇರಿಸಿದೆ. ಹೊಸ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ಸಂಜೆ 6ರವರೆಗೂ ತೆರೆದಿರುತ್ತವೆ. ವಾಣಿಜ್ಯ ಮಳಿಗೆಗಳಲ್ಲಿ ಉದ್ಯೋಗಿಗಳು ಲಸಿಕೆ ಹಾಕಿಸಿಕೊಂಡಿದ್ದಲ್ಲಿ ಸಂಜೆ 7ರವರೆಗೂ ಉಳಿಯಲು ಅವಕಾಶವಿದೆ. ಧಾರ್ಮಿಕ ಸ್ಥಳಗಳಿಗೆ ಷರತ್ತುಬದ್ಧ ಪ್ರವೇಶಕ್ಕೆ ಅವಕಾಶವಿದ್ದು, ಜುಲೈ 1ರಿಂದ ವಿವಾಹ ಸಮಾರಂಭಗಳಿಗೆ ಅನುಮತಿ ನೀಡಲಾಗಿದೆ.

ರಾಜ್ಯದ ಗೃಹ ಇಲಾಖೆ ಶನಿವಾರ "ಮೂರು ಪದರದ ಸಾರ್ವಜನಿಕ ಶಿಸ್ತು 3.0" ಬಿಡುಗಡೆ ಮಾಡಿದ್ದು, ಇದು ಜೂನ್ 28ರಿಂದ ಜಾರಿಯಾಗಲಿದೆ. 25ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಎಲ್ಲ ಸಿಬ್ಬಂದಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಉಳಿದೆಡೆ ಶೇಕಡ 50 ಸಿಬ್ಬಂದಿ ಕಾರ್ಯ ನಿರ್ವಹಿಸಬಹುದಾಗಿದೆ.

ಉದ್ಯೋಗಿಗಳ ಪೈಕಿ ಶೇಕಡ 60ಕ್ಕಿಂತ ಹೆಚ್ಚು ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದರೆ, ಶೇಕಡ 100ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News