×
Ad

ಜಮ್ಮುವಿನ ವಾಯುಪಡೆಯ ನಿಲ್ದಾಣದಲ್ಲಿ 2 ಕಡೆ ಕಡಿಮೆ ತೀವ್ರತೆಯ ಸ್ಫೋಟ

Update: 2021-06-27 10:32 IST
photo: DNA

ಜಮ್ಮು: ಜಮ್ಮು ವಿಮಾನ ನಿಲ್ದಾಣದ ವಾಯುಪಡೆ ಸ್ಟೇಶನ್ ನಲ್ಲಿ  ರವಿವಾರ ಮುಂಜಾನೆ ಕಡಿಮೆ ತೀವ್ರತೆಯ ಸ್ಫೋಟಗಳು ನಡೆದ ಬಗ್ಗೆ ವರದಿಯಾದ ನಂತರ ಸಂಭವನೀಯ ಡ್ರೋನ್ ದಾಳಿಯ ಬಗ್ಗೆ ಭಾರತೀಯ ವಾಯುಪಡೆ (ಐಎಎಫ್) ತನಿಖೆ ನಡೆಸುತ್ತಿದೆ.

ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರದ ತಜ್ಞರು ಹಾಗೂ  ವಿಧಿವಿಜ್ಞಾನ  ತಂಡಗಳನ್ನು ಜಮ್ಮು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು

ಮುಂಜಾನೆ 2 ಗಂಟೆ ಸುಮಾರಿಗೆ 2 ಕಡೆ ಸ್ಫೋಟಗಳು ಸಂಭವಿಸಿವೆ ಎಂದು ವರದಿ ಯಾಗಿದೆ.

"ಜಮ್ಮು ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ರವಿವಾರ ಮುಂಜಾನೆ ಎರಡು ಕಡಿಮೆ ತೀವ್ರತೆಯ ಸ್ಫೋಟಗಳು ವರದಿಯಾಗಿವೆ. ಒಂದು ಸ್ಪೋಟದಿಂದ ಕಟ್ಟಡದ ಮೇಲ್ಛಾವಣಿಗೆ ಸಣ್ಣ ಹಾನಿಯಾಗಿದೆ ಮತ್ತು ಇನ್ನೊಂದು ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಯಾವುದೇ ಸಲಕರಣೆಗಳಿಗೆ ಯಾವುದೇ ಹಾನಿಯಾಗಿಲ್ಲ. ನಾಗರಿಕ ಏಜೆನ್ಸಿಗಳೊಂದಿಗೆ ತನಿಖೆ ಪ್ರಗತಿಯಲ್ಲಿದೆ''ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

ವಾಯುಪಡೆಯ ಎಫ್‌ಐಆರ್ (ಮೊದಲ ಮಾಹಿತಿ ವರದಿ) ಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಇಂದಿನ ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೈಸ್ ಏರ್ ಚೀಫ್, ಏರ್ ಮಾರ್ಷಲ್ ಎಚ್.ಎಸ್. ಅರೋರಾ ಅವರೊಂದಿಗೆ ಮಾತನಾಡಿದರು.

ಜಮ್ಮು ವಿಮಾನ ನಿಲ್ದಾಣದ ರನ್ ವೇ ಹಾಗೂ ವಾಯು ಸಂಚಾರ ನಿಯಂತ್ರಣವು ಐಎಎಫ್ ನಿಯಂತ್ರಣದಲ್ಲಿದೆ ಹಾಗೂ  ಪ್ರಯಾಣಿಕರ ವಿಮಾನ ಹಾರಾಟವನ್ನು ನಿರ್ವಹಿಸಲು ಕೂಡ  ಇದನ್ನು ಬಳಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News