ಆರ್ಚರಿ ವಿಶ್ವಕಪ್: ಭಾರತೀಯ ಮಹಿಳಾ ತಂಡಕ್ಕೆ ಚಿನ್ನದ ಪದಕ

Update: 2021-06-27 09:10 GMT

ಹೊಸದಿಲ್ಲಿ: ಪ್ಯಾರಿಸ್  ನಲ್ಲಿ  ನಡೆಯುತ್ತಿರುವ ಆರ್ಚರಿ(ಬಿಲ್ಲುಗಾರಿಕೆ) ವಿಶ್ವಕಪ್ ಹಂತ -3 ರಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕ್ತ್  ಹಾಗೂ  ಕೋಮಲಿಕಾ ಬಾರಿ ಅವರನ್ನೊಳಗೊಂಡ ಭಾರತದ ಮಹಿಳಾ ರಿಕರ್ವ್  ತಂಡ ಚಿನ್ನ ಗೆದ್ದುಕೊಂಡಿದೆ.

ರವಿವಾರ ನಡೆದ  ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಮೆಕ್ಸಿಕೊವನ್ನು ಸೋಲಿಸಿದೆ.

 ಈ ತಿಂಗಳ ಆರಂಭದಲ್ಲಿ ನಡೆದ ಅಂತಿಮ ಒಲಿಂಪಿಕ್ಸ್  ಅರ್ಹತಾ ಪಂದ್ಯದಲ್ಲಿ ಮೊದಲ ಸುತ್ತಿನ ಸೋಲಿನ ನಿರಾಶೆಯಿಂದ  ಈ ಮೂವರು ಬೇಗನೆ ಹೊರ ಬಂದರು . ಮೆಕ್ಸಿಕೊ ವಿರುದ್ಧ 5-1 ಅಂತರದಿಂದ  ವಿಜಯಶಾಲಿಯಾಗಿ  ಭಾರತಕ್ಕೆ ಈ ವಿಶ್ವಕಪ್ ನಲ್ಲಿ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು.

ಇದಕ್ಕೂ ಮುನ್ನ ಶನಿವಾರ ನಡೆದ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತವು ಅಭಿಷೇಕ್ ವರ್ಮಾ ಮೂಲಕ ಚಿನ್ನದ ಪದಕ ಗೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News