ಕೋವಿಡ್ ಸಾಂಕ್ರಾಮಿಕ: ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Update: 2021-06-28 11:05 GMT

ಹೊಸದಿಲ್ಲಿ: ಕೋವಿಡ್‌ ಸಾಂಕ್ರಾಮಿಕವು ದೇಶಾದ್ಯಂತ ಹಲವು ನಷ್ಟಗಳನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ ಇಂದು ವ್ಯವಹಾರಗಳಿಗೆ ಮತ್ತು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. 

ಕೋವಿಡ್‌ ಪೀಡಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಸಾಲ ಖಾತರಿ ಯೋಜನೆ

ಆರೋಗ್ಯ ಕ್ಷೇತ್ರಕ್ಕೆ 50,000 ಕೋಟಿ ರೂ. ಸಾಲ ಖಚಿತ ಯೋಜನೆ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ 25 ಲಕ್ಷ ಜನರಿಗೆ ಸಾಲ ಖಾತರಿ ಯೋಜನೆ

ಹೊಸ ಹೂಡಿಕೆಗಳತ್ತ ಗಮನ ಹರಿಸುವ ಸಲುವಾಗಿ ಸಾಲ ಖಾತರಿ ಯೋಜನೆ, ಹಳೆಯದನ್ನು ಮರುಪಾವತಿ ಮಾಡುವುದಲ್ಲ

ತುರ್ತು ಸಾಲ ಖಾತರಿ ಯೋಜನೆಯ ಸಲುವಾಗಿ ಹೆಚ್ಚುವರಿ 1.5 ಲಕ್ಷ ಕೋಟಿ ರೂ.ಯನ್ನು ವಿತ್ತ ಸಚಿವೆ ಘೋಷಿಸಿದರು.

11,000 ನೋಂದಣಿಗೊಂಡ ಪ್ರವಾಸಿ ಗೈಡ್‌ ಗಳಿಗೆ ಆರ್ಥಿಕ ಸಹಾಯ. ಪ್ರಯಾಣ ಮತ್ತು ಪ್ರವಾಸೋದ್ಯಮ ಮಧ್ಯಸ್ಥಗಾರರಿಗೆ ಸರಕಾರದಿಂದ 100ಶೇ. 10 ಲಕ್ಷ ರೂ. ಮತ್ತು 1ಲಕ್ಷ ರೂ. ಸಾಲ ವ್ಯವಸ್ಥೆ.

ಮಕ್ಕಳು ಮತ್ತು ಮಕ್ಕಳ ಆರೈಕೆಗೆಯ ಕುರಿತು ಪ್ರಾಥಮಿಕ ಗಮನ ಹರಿಸಲು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ 23,220 ಕೋಟಿ ರೂ. ಘೋಷಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News