ಕೋಮುದ್ವೇಷದ ಟ್ವೀಟ್:‌ ಝೀ ನ್ಯೂಸ್‌ ವಿರುದ್ಧ ಪ್ರಕರಣ ದಾಖಲಿಸಿದ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ

Update: 2021-06-28 15:29 GMT

ಹೊಸದಿಲ್ಲಿ: ಕೇಂದ್ರ ಸರಕಾರವು ಜಾರಿಗೆ ತಂದಿರುವ ನೂತನ ಐಟಿ ನಿಯಮಗಳ ವಿರುದ್ಧ ಹಲವು ಅಪಸ್ವರಗಳು ಕೇಳಿ ಬರುತ್ತಿರುವ ಬೆನಲ್ಲಿಯೇ ಇದೇ ನಿಯಮಗಳನ್ನು ಬಳಸಿಕೊಂಡು ಝೀ ನ್ಯೂಸ್‌ ವಾಹಿನಿ ವಿರುದ್ಧ ಆರ್ಟಿಐ ಹಾಗೂ ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಗೋಖಲೆ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

"ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸಲು ಇದು ಸರಿಯಾದ ಸಮಯವೆಂದು ನಾನು ಭಾವಿಸಿದ್ದೇನೆ. ಝೀ ನ್ಯೂಸ್‌ ವಾಹಿನಿಗೆ ನಾನು ನೂತನ ಐಟಿ ಕಾಯ್ದೆಯ ಅನ್ವಯ ನೋಟಿಸ್‌ ಕಳುಹಿಸಿದ್ದೇ. ನಿನ್ನೆ ಕೋಮುದ್ವೇಷ ಹಾಗೂ ಪೂರ್ವಾಗ್ರಹಪೀಡಿತ ಟ್ವೀಟ್‌ ಮಾಡಿದ್ದಾರೆ. ನಾನು ಹೊಸ ಐಟಿ ನಿಯಮಗಳನ್ನು ಬಳಸುತ್ತಿರುವುದನ್ನು ರವಿಶಂಕರ್‌ ಪ್ರಸಾದ್‌ ನೋಡುತ್ತಿದ್ದಾರೆಂದು ಭಾವಿಸುತ್ತೇನೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಹಾಗೂ ಮ್ಯಾಜಿಸ್ಟ್ರೇಟರ್‌ ಬಳಿ ಕೇಸು ದಾಖಲು ಮಾಡಿದ್ದೇನೆ. ಅದರೊಂದಿಗೆ ಎನ್‌ಬಿಎಸ್‌ಎಗೂ ಪ್ರಕರಣ ದಾಖಲಿಸಲಾಗಿದೆ. ದ್ವೇಷಪೂರಿತ ಮಾತುಗಳು ಮಾತನಾಡುವ ಸ್ವಾತಂತ್ರ್ಯದಲ್ಲಿ ಒಳಪಡುವುದಿಲ್ಲ. ಒಂದು ವೇಳೆ ಝೀ ನ್ಯೂಸ್‌ ಮುಸ್ಲಿಮರನ್ನು ಗುರಿಪಡಿಸುವುದರಿಂದ ಹಿಂದೆ ಸರಿಯಬೇಕೆಂದು ಬಯಸಿದ್ದರೆ, ಅವರಿಗೆ ಈಗಾಗಲೇ ಸಮಯವಾಗಿದೆ ಮತ್ತು ಇನ್ನೊಬ್ಬರು ಅವರನ್ನು ಹಿಡಿದಿಟ್ಟುಕೊಳ್ಳುತ್ತಾರೆ ಎಂಬುವುದು ಅರಿತಿರಬೇಕು" ಎಂದು ಅವರು ಟ್ವಿಟರ್‌ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News