ದ.ಕ.: ಸೋಮವಾರ 33,664 ಮಂದಿಗೆ ಕೋವಿಡ್ ಲಸಿಕೆ

Update: 2021-06-28 18:20 GMT

ಮಂಗಳೂರು, ಜೂ.28: ದ.ಕ. ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಮುಂದುವರಿದಿದ್ದು, ಸೋಮವಾರ ಒಂದೇ ದಿನ 33,664 ಮಂದಿಗೆ ಕೋವಿಡ್ ಲಸಿಕೆ ಹಾಕಲಾಯಿತು.

ಮಂಗಳೂರು ತಾಲೂಕಿನಲ್ಲಿ 19,916, ಬಂಟ್ವಾಳ- 6,707, ಬೆಳ್ತಂಗಡಿ- 2,464, ಪುತ್ತೂರು- 2909, ಸುಳ್ಯದಲ್ಲಿ 1,668 ಮಂದಿಗೆ ಲಸಿಕೆ ಹಾಕಲಾಗಿದೆ.

* 12,323 ಬೋಧಕ-ವಿದ್ಯಾರ್ಥಿಗಳಿಗೆ ಲಸಿಕೆ: ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾದ ಲಸಿಕಾರಣದಲ್ಲಿ 12,323 ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಇದರಲ್ಲಿ 11,696 ವಿದ್ಯಾರ್ಥಿಗಳಿದ್ದು, 627 ಮಂದಿ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News