ಅಮೆರಿಕ ಸ್ಪೆಲಿಂಗ್ ಬೀ ಸ್ಪರ್ಧೆಯ 11 ಫೈನಲಿಗರಲ್ಲಿ 9 ಭಾರತೀಯ ಮೂಲದವರು
Update: 2021-06-29 20:53 IST
ವಾಶಿಂಗ್ಟನ್, ಜೂ. 29: ಈ ವರ್ಷದ ಅಮೆರಿಕ ಸ್ಪೆಲಿಂಗ್ ಬೀ ಸ್ಪರ್ಧೆಯ 11 ಫೈನಲಿಗರಲ್ಲಿ 9 ಮಂದಿ ಭಾರತೀಯ ಅಮೆರಿಕನ್ ಆಗಿದ್ದಾರೆ. ಈ ಕಠಿಣ ಸ್ಪರ್ಧೆಯ ಇತಿಹಾಸದುದ್ದಕ್ಕೂ ಭಾರತೀಯ ಮೂಲದವರೇ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದಾರೆ.
2021 ಸ್ಕ್ರಿಪ್ಸ್ ನ್ಯಾಶನಲ್ ಸ್ಪೆಲಿಂಗ್ ಬೀ ಫೈನಲ್ಸ್ ಜುಲೈ 8ರಂದು ನಡೆಯಲಿದೆ ಎಂದು ಸಂಘಟಕರು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
ಸಾಂಪ್ರದಾಯಿಕವಾಗಿ ನಡೆಯುವ ಒಂದು-ಪದ ಸುತ್ತಿನಲ್ಲಿ ವಿಜಯಿಯನ್ನು ನಿರ್ಧರಿಸಲು ಅಸಾಧ್ಯವಾದರೆ, ‘ಸ್ಪೆಲ್-ಆಫ್’ ಎಂಬ ಆಯ್ಕೆಯೂ ಲಭ್ಯವಿದೆ ಎಂದು ಹೇಳಿಕೆ ತಿಳಿಸಿದೆ.
ಫ್ರೋರಿಡದ ಒರ್ಲಾಂಡೊ ಸಮೀಪದಲ್ಲಿರುವ ವಾಲ್ಟ್ ಡಿಸ್ನಿ ವರ್ಲ್ಡ್ ರಿಸಾರ್ಟ್ ನ ಇಎಸ್ಪಿಎನ್ ವೈಡ್ ವರ್ಲ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸ್ಪರ್ಧಾಳುಗಳ ದೈಹಿಕ ಉಪಸ್ಥಿತಿಯೊಂದಿಗೆ ಸ್ಪರ್ಧೆಗಳು ನಡೆಯಲಿವೆ.