100 ಮೀ.,200 ಮೀ. ಓಟಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ದ್ಯುತಿ ಚಂದ್

Update: 2021-06-30 11:36 GMT

ಹೊಸದಿಲ್ಲಿ:ಭಾರತದ ಪ್ರಮುಖ ಓಟಗಾರ್ತಿ ದ್ಯುತಿ ಚಂದ್ ವಲ್ಡ್ ರ್ಯಾಂಕಿಂಗ್ ಕೋಟಾದ ಮೂಲಕ ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ 100 ಮೀ. ಹಾಗೂ 200 ಮೀ. ಓಟಗಳೆರಡರಲ್ಲೂ ಬುಧವಾರ  ಅರ್ಹತೆ ಪಡೆದಿದ್ದಾರೆ.

ವಿಶ್ವ ರ್ಯಾಂಕಿಂಗ್ ಮೂಲಕ 100 ಮೀ.ನಲ್ಲಿ 22 ಸ್ಥಾನಗಳು ಹಾಗೂ 200 ಮೀ.ನಲ್ಲಿ 15 ಸ್ಥಾನಗಳು ಲಭ್ಯವಿದೆ.  ಚಂದ್ 100 ಮೀ.ನಲ್ಲಿ ವಿಶ್ವದ ನಂ.44ನೇ ಸ್ಥಾನದಲ್ಲಿದ್ದರೆ, 200 ಮೀ. ಓಟದಲ್ಲಿ 51ನೇ ಸ್ಥಾನದಲ್ಲಿದ್ದಾರೆ. ಈ ರ್ಯಾಂಕಿನ ಸಹಾಯದಿಂದ ದ್ಯುತಿ ಮುಂದಿನ ತಿಂಗಳು ನಡೆಯುವ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.

ದ್ಯುತಿ ತನ್ನ ಕೊನೆಯ ರೇಸ್ ನಲ್ಲಿ ನೇರ ಒಲಿಂಪಿಕ್ಸ್ ಅರ್ಹತಾ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು. ಈಗ ನಡೆಯುತ್ತಿರುವ ಅಂತರ್-ರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ 100 ಮೀ. ಫೈನಲ್ ನಲ್ಲಿ 4ನೇ ಸ್ಥಾನ ಪಡೆದು ನಿರಾಸೆಗೊಳಿಸಿದ್ದರು.

ಕಳೆದ ವಾರ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ ಪ್ರಿ-4ರಲ್ಲಿ  ಮಹಿಳೆಯರ 100 ಮೀ. ಓಟದಲ್ಲಿ ನೂತನ ವಿಶ್ವ ದಾಖಲೆಯನ್ನು  ನಿರ್ಮಿಸಿದ್ದ ದ್ಯುತಿ ಚಂದ್ ಕೇವಲ 0.02 ಸೆಕೆಂಡ್ ಗಳಲ್ಲಿ ಒಲಿಂಪಿಕ್ಸ್ ಅರ್ಹತಾ ಸಮಯ ತಲುಪಲು ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News