10 ಲಕ್ಷ ರೂ. ತನಕ ಸಾಲಕ್ಕಾಗಿ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಗೆ ಮಮತಾ ಬ್ಯಾನರ್ಜಿ ಚಾಲನೆ
ಕೋಲ್ಕತಾ: ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 10 ಲಕ್ಷ ರೂ.ಮಿತಿ ಹೊಂದಿರುವ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದು, ಇದು ಟಿಎಂಸಿಯ ಚುನಾವಣಾ ಪೂರ್ವದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.
10 ವರ್ಷದಿಂದ ಬಂಗಾಳದಲ್ಲಿ ವಾಸವಾಗಿರುವ 40 ವರ್ಷದೊಳಗಿನ ವಿದ್ಯಾರ್ಥಿ ಈ ಕಾರ್ಡ್‌ಗೆ ಅರ್ಹನಾಗಿರುತ್ತಾನೆ. ಇದನ್ನು ಭಾರತದಲ್ಲಿ ಅಥವಾ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸಾಲ ಪಡೆಯಲು ಬಳಸಬಹುದು.
"ಈ ಸಾಲಕ್ಕೆ ಯಾವುದೇ ಗ್ಯಾರಂಟಿಯ ಅಗತ್ಯವಿಲ್ಲ. ರಾಜ್ಯವು ಗ್ಯಾರಂಟಿ ನೀಡುತ್ತದೆ" ಎಂದು ಮಮತಾ ಬ್ಯಾನರ್ಜಿ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದನ್ನು "ಅನನ್ಯ ಯೋಜನೆ" ಎಂದು ಕರೆದರು.
ಭಾರತದಲ್ಲಿ ಅಥವಾ ವಿದೇಶದಲ್ಲಿ ಪದವಿಪೂರ್ವ, ಸ್ನಾತಕೋತ್ತರ, ಡಾಕ್ಟರೇಟ್ ಹಾಗೂ ಸ್ನಾತಕೋತ್ತರ ಅಧ್ಯಯನಕ್ಕೆ ಸಾಲ ಲಭ್ಯವಿರುತ್ತದೆ ಎಂದು ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಇದು ಲಭ್ಯವಿರಬಹುದು.
ಕೋರ್ಸ್ ಶುಲ್ಕ, ಬೋಧನೆ, ಹಾಸ್ಟೆಲ್ ಶುಲ್ಕ, ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳಿಗೆ ಸಾಲವನ್ನು ತೆಗೆದುಕೊಳ್ಳಬಹುದು. ಸಾಲವನ್ನು ಯಾವುದೇ ಬ್ಯಾಂಕ್‌ನಿಂದ- ಸರಕಾರಿ ಅಥವಾ ಖಾಸಗಿ ಅಥವಾ ಸಹಕಾರಿ ಸಂಸ್ಥೆಗಳಿಂದ ತೆಗೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಹೇಳಿದರು.
ಕಾರ್ಡ್‌ನಲ್ಲಿ 10 ಲಕ್ಷ ರೂ. ಸಾಲ ತೆಗೆದುಕೊಳ್ಳುವ ಯಾವುದೇ ವಿದ್ಯಾರ್ಥಿ ಅದನ್ನು ಮರುಪಾವತಿಸಲು 15 ವರ್ಷಗಳು ಇರುತ್ತವೆ.