×
Ad

'ಟೊಳ್ಳು ಬೆದರಿಕೆಗಳು': ಐಟಿ ನೋಟಿಸ್ ಗೆ ಪ್ರತಿಕ್ರಿಯಿಸಿದ ಆಪ್ ಶಾಸಕಿ ಅತಿಷಿ

Update: 2021-06-30 18:30 IST
ಅತಿಷಿ (PTI)

ಹೊಸದಿಲ್ಲಿ : ತಮ್ಮ 2020 ಚುನಾವಣಾ ಅಫಿಡವಿಟ್ ಡಿಕ್ಲರೇಶನ್ ಕುರಿತಂತೆ ತಮಗೆ ಐಟಿ ಇಲಾಖೆಯಿಂದ ನೋಟಿಸ್ ಜಾರಿಯಾಗಿದೆ ಎಂದು ತಿಳಿಸಿರುವ ಆಪ್ ಶಾಸಕಿ ಅತಿಷಿ, ಇಂತಹ "ಟೊಳ್ಳು ಬೆದರಿಕೆಗಳನ್ನು" ಖಂಡಿಸಿ ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಪ್ ಕೂಡ ಈ ಐಟಿ ನೋಟಿಸ್ ಅನ್ನು ʼಹಾಸ್ಯಾಸ್ಪದ' ಎಂದು ಬಣ್ಣಿಸಿದೆ.

ತಮಗೆ ಭೀತಿ ಮೂಡಿಸಲು ಈ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಿದ ಅತಿಷಿ "ನಾವು ರಾಜಕೀಯದಲ್ಲಿ ಕಷ್ಟ ಪಟ್ಟು ಮೇಲೆ ಬಂದವರು ಹಾಗೂ ಇಂತಹ ಟೊಳ್ಳು ಬೆದರಿಕೆಗಳಿಗೆ ಜಗ್ಗುವುದಿಲ್ಲ,'' ಎಂದಿದ್ದಾರೆ.

"ನನಗೆ ಅಡಗಿಸಿಡಲು ಏನೂ ಇಲ್ಲ. ಐಟಿ ಇಲಾಖೆ ಕರೆದಾಗಲೆಲ್ಲಾ ಎಲ್ಲಾ ವಿವರಗಳನ್ನು ಒದಗಿಸಲು ತೆರಳುತ್ತೇನೆ. ಆದೇ ಸಮಯ ಬಿಜೆಪಿ ನಾಯಕರು ತಮ್ಮ ಬ್ಯಾಂಕ್ ಖಾತೆಗಳು ಹಾಗೂ ಆಸ್ತಿ ವಿವರಗಳನ್ನು ಬಹಿರಂಗಪಡಿಸುತ್ತಾರೆಯೇ ಎಂದು ಸವಾಲೊಡ್ಡಲು ಬಯಸುತ್ತೇನೆ,'' ಎಂದು ಅವರು ಹೇಳಿದರು.

ತಮ್ಮ ಚುನಾವಣಾ ಅಫಿಡವಿಟ್‍ನಲ್ಲಿ ಅವರು ತಾವು 2012ಗಿಂತ ಮುಂಚೆ ಗಳಿಕೆ ಮಾಡಿದ್ದ ರೂ 59 ಲಕ್ಷ ಮೌಲ್ಯದ ಎಫ್‍ಡಿ ಮತ್ತು ಮ್ಯೂಚುವಲ್ ಫಂಡ್  ಕುರಿತಾದ ಚರಾಸ್ತಿಯನ್ನು ಘೋಷಿಸಿದ್ದರು. ಇದರ ಆಧಾರದಲ್ಲಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News