ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಡ್ರೋನ್‌ಗಳ ಬಳಕೆಗೆ ನಿಷೇಧ

Update: 2021-06-30 14:38 GMT
ಸಾಂದರ್ಭಿಕ ಚಿತ್ರ

ಜಮ್ಮು,ಜೂ.30: ಇತ್ತೀಚಿಗೆ ಇಲ್ಲಿಯ ವಾಯುಪಡೆಯ ನೆಲೆಯ ಮೇಲೆ ಡ್ರೋನ್‌ಗಳಿಂದ ಬಾಂಬ್ ದಾಳಿಗಳು ನಡೆದ ಬಳಿಕ ಹೆಚ್ಚಿಸಲಾಗಿರುವ ಭದ್ರತೆಯ ನಡುವೆಯೇ ಗಡಿಜಿಲ್ಲೆ ರಾಜೌರಿಯಲ್ಲಿ ಜಿಲ್ಲಾಧಿಕಾರಿಗಳು ಡ್ರೋನ್‌ಗಳ ಬಳಕೆ,ದಾಸ್ತಾನು,ಮಾರಾಟ ಮತ್ತು ಅವುಗಳನ್ನು ಹೊಂದಿರುವುದನ್ನು ನಿಷೇಧಿಸಿ ಬುಧವಾರ ಆದೇಶಿಸಿದ್ದಾರೆ.

 ಡ್ರೋನ್‌ಗಳು ಅಥವಾ ಅಂತಹುದೇ ಹಾರಾಡುವ ವಸ್ತುಗಳನ್ನು ಹೊಂದಿರುವವರು ಅವುಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದೂ ಜಿಲ್ಲಾಧಿಕಾರಿ ರಾಜೇಶ ಕುಮಾರ ಶವಾನ್ ಅವರು ನಿರ್ದೇಶ ನೀಡಿದ್ದಾರೆ. ಆದರೆ ನಕ್ಷೆ ತಯಾರಿ,ಸರ್ವೇಕ್ಷಣೆ ಮತ್ತು ನಿಗರಾನಿಗಾಗಿ ಡ್ರೋನ್‌ಗಳನ್ನು ಬಳಸುವ ಸರಕಾರಿ ಸಂಸ್ಥೆಗಳು ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ಮತ್ತು ಕಾರ್ಯಕಾರಿ ದಂಡಾಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.

  ರವಿವಾರ ನಸುಕಿನಲ್ಲಿ ಜಮ್ಮುವಿನ ವಾಯುಪಡೆ ನೆಲೆಯ ಮೇಲೆ ಕೇವಲ ಆರು ನಿಮಿಷಗಳ ಅಂತರದಲ್ಲಿ ಎರಡು ಬಾಂಬ್‌ಗಳು ಬಿದ್ದಿದ್ದವು. ಇದರಿಂದಾಗಿ ಇಬ್ಬರು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಇದು ಪ್ರಮುಖ ಸ್ಥಾವರಗಳ ಮೇಲೆ ದಾಳಿಗಾಗಿ ಪಾಕ್ ಭಯೋತ್ಪಾದಕರು ಡ್ರೋನ್‌ಗಳನ್ನು ನಿಯೋಜಿಸಿದ ಮೊದಲ ಘಟನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News