ಜುಲೈ 19ರಿಂದ ಮುಂಗಾರು ಅಧಿವೇಶನ
Update: 2021-07-02 23:29 IST
ಹೊಸದಿಲ್ಲಿ, ಜು.2: ಸಂಸತ್ ನ ಮುಂಗಾರು ಅಧಿವೇಶನ ಜುಲೈ 19ರಂದು ಆರಂಭಗೊಳ್ಳಲಿದ್ದು, ಆಗಸ್ಟ್ 13ಂದು ಕೊನೆಗೊಳ್ಳಲಿದೆ. ಸಂಸತ್ ಅಧಿವೇಶನದ ಸಂದರ್ಭ ಸಂಸತ್ ಭವನದ ಸಂಕೀರ್ಣದಲ್ಲಿ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದೆಂದು ಸಂಸತ್ಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಗಾರು ಅಧಿವೇಶನವು 20 ಬೈಠಕ್ ಗಳಲ್ಲಿ ನಡೆಯುವ ಸಾಧ್ಯತೆಯಿದೆಯೆಂದವರು ಹೇಳಿದರು. ಜೂನ್ 19ರವರೆಗೆ 400ಕ್ಕೂ ಅಧಿಕ ಲೋಕಸಭಾ ಸದಸ್ಯರಿಗೆ ಕೋವಿಡ್19 ನಿರೋಧಕ ಲಸಿಕೆಯನ್ನು ನೀಡಲಾಗಿದೆ ಎಂದವರು ತಿಳಿಸಿದ್ದಾರೆ. ಬಹುತೇಕ ಸಂಸದರು ತಮ್ಮ ತವರು ರಾಜ್ಯಗಳಲ್ಲೇ ಲಸಿಕೆಯನ್ನು ಪಡೆದುಕೊಂಡಿರುವುದರಿಂದ ಲಸಿಕೀಕರಣಗೊಳಗಾದ ಸಂಸದರ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದವರು ಹೇಳಿದ್ದಾರೆ.
ಲೋಕಸಭಾ ಕಲಾಪಗಳ ವರದಿ ಮಾಡುವ ಪತ್ರಕರ್ತರಿಗೂ ಲಸಿಕೀಕರಣಗೊಳಿಸಲಾಗಿದೆ.